ಬೆಂಗಳೂರು:ಸಿನಿಮಾ,ಸಿರೀಯಲ್ ಅಂತ ಕನಸು ಕಂಡವರೇ ಇವರ ಬಂಡವಾಳ, ಸಿನಿಮಾ ಆಸೆ ತೋರಿಸಿ ದುಬೈಗೆ ಫ್ಲೈಟ್ ಹತ್ತಿಸುತ್ತಿದ್ದ ಇವ್ರು, ಯುವತಿಯರನ್ನ ಡ್ಯಾನ್ಸ್ ಬಾರ್ ಗೆ ಮಾರಾಟ ಮಾಡ್ತಿದ್ರು. ಇಂತಹದೊಂದು ದೊಡ್ಡ ಜಾಲವನ್ನ ಸಿಸಿಬಿ ಅಧಿಕಾರಿಗಳು ಈಗ ಪತ್ತೆ ಮಾಡಿದ್ದಾರೆ.
ಸಿನಿಮಾ ಜ್ಯೂನಿಯರ್ ಆರ್ಟಿಸ್ಟ್ ಗಳಿಗೆ ಗಾಳ ಹಾಕ್ತಿದ್ದ, ಇವೆಂಟ್ ಮ್ಯಾನೇಜ್ಮೆಂಟ್ ಮಾಡ್ತಿದ್ದ ಆರೋಪಿಗಳು, ದುಬೈ ಗೆ ಹೋದ್ರೆ ಲಕ್ಷ ಲಕ್ಷ ಹಣ ಸಂಪಾದನೆ ಮಾಡಬಹುದು ಎಂದು ಪುಸಲಾಯಿಸುತ್ತಿದ್ರು. ಅಲ್ಲೂ ಕೂಡ ಡ್ಯಾನ್ಸ್,ಆಕ್ಟಿಂಗ್ ಕೆಲಸ ಇರುತ್ತೆ ಅಂತ ಹೇಳಿ ಯುವತಿಯರಿಗೆ ಐವತ್ತು ಸಾವಿರ ಅಡ್ವಾನ್ಸ್ ಕೊಟ್ಟು, ವೀಸಾ,ಪಾಸ್ ಪೋರ್ಟ್ ಮಾಡಿ ದುಬೈ ಫ್ಲೈಟ್ ಹತ್ತಿಸುತ್ತಿದ್ರು. ಹೀಗೆ ಕನಸು ಕಟ್ಟಿಕೊಂಡು ದುಬೈಗೆ ಎಂಟ್ರಿ ಆದ ಯುವತಿಯರಿಗೆ ಡ್ಯಾನ್ಸ್ ಬಾರ್ ನಲ್ಲಿ ಡ್ಯಾನ್ಸ್ ಮಾಡೋ ಕೆಲಸ ಕೊಡ್ತಿದ್ರು. ಇದ್ರ ಜೊತೆಗೆ ಯುವತಿಯರನ್ನ ಬಲವಂತವಾಗಿ ಅನೈತಿಕ ಚಟುವಟಿಗೂ ಬಳಸಿ ಕೊಳ್ತಿದ್ರು.
ಈ ಪ್ರಕರಣದಲ್ಲಿ ಬಸವರಾಜ,ಆದರ್ಶ, ರಾಜೇಂದ್ರ, ಮಾರಿಯಪ್ಪನ್, ಚಂದು, ಅಶೋಕ್ ಮತ್ತು ರಾಜೀವ್ ಗಾಂಧಿ ಪ್ರಮುಖ ಆರೋಪಿಗಳಾಗಿದ್ದು ಎಲ್ರೂ ಕೂಡ ಆರ್ಟಿಸ್ಟ್ ಏಜೆಂಟ್ ಕೆಲಸ ಮಾಡ್ತಿದ್ರು. ಇವ್ರ ಸಂಪರ್ಕದಲ್ಲಿರೋ ಯುವತಿಯರಿಗೆ ಹಣದ ಆಮಿಷವೊಡ್ಡಿ ಆರೋಪಿಗಳು ಯುವತಿಯರನ್ನ ದುಬೈಗೆ ಕಳಿಸೋ ತಯಾರಿ ನಡೆಸ್ತಿದ್ರು. ದುಬೈ ನಲ್ಲಿ ಕಂಟ್ರಾಕ್ಟ್ ಮಾಡಿಕೊಂಡಿದ್ದ ಇವ್ರು ಅಲ್ಲಿ ಡ್ಯಾನ್ಸ್ ಬಾರ್ ಗಳಿಂದ ಲಕ್ಷ ಲಕ್ಷ ಹಣ ಪಡೆಯುತ್ತಿದ್ರು ಎಂದು ತಿಳಿದು ಬಂದಿದೆ. ಸದ್ಯ ಈ ಪ್ರಕರಣ ಭೇದಿಸಿರೋ ಇನ್ಸ್ಪೆಕ್ಟರ್ ಹಜರೇಶ್ ಅಂಡ್ ದುಬೈಗೆ ಶಿಫ್ಟ್ ಆಗಬೇಕಿದ್ದ 17 ಯುವತಿಯರನ್ನು ರಕ್ಷಿಸಿದ್ದಾರೆ.
ಆರೋಪಿಗಳು ಕರ್ನಾಟಕ, ತಮಿಳುನಾಡು , ಕೇರಳ ಸೇರಿದಂತೆ ಹಲವು ರಾಜ್ಯದ ಯುವತಿಯರನ್ನ ದುಬೈಗೆ ಶಿಫ್ಟ್ ಮಾಡಿದ್ದಾರೆ.ಇದುವರೆಗೂ 95 ಯುವತಿಯರನ್ನ ದುಬೈಗೆ ಕಳುಹಿಸಿರುವ ಮಾಹಿತಿ ಲಭ್ಯವಾಗಿದೆ. ಇನ್ನೂ ಇಂತಹ ಜಾಲದಲ್ಲಿ ಯಾರಾದ್ರೂ ಸಿಲುಕಿಕೊಂಡಿದ್ರೆ ಸಿಸಿಬಿ ಮಾಹಿತಿ ನೀಡಲು ಅಧಿಕಾರಿಗಳು ತಿಳಿಸಿದ್ದಾರೆ.
PublicNext
08/04/2022 08:13 am