ಬೆಂಗಳೂರು: ಬೆಂಗಳೂರು,ಮೈಸೂರಿನಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಗಳ ಮನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಟಿಓ ಸೈಯದ್ ಮೊಹಮದ್ ಹಾಗೂ ಮೈಸೂರಿನ ಸಿಟಿ ಐ ಸಿ.ಎಂ.ಯಶವಂತ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇವ್ರ ಜೊತೆಗೆ ಕಾರು ಚಾಲಕ ಕೃಷ್ಣಮೂರ್ತಿಯ ಮಲೇಶ್ವರಂ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಲಾರಿ ಚಾಲಕರನ್ನು ತಡೆದು ಬೆದರಿಸಿ ಪೋನ್ ಪೇ ಮೂಲಕ ಹಣ ಪಡೆದಿದ್ದ ಆರೋಪ ಅಧಿಕಾರಿಗಳ ಮೇಲೆ ಕೇಳಿ ಬಂದಿತ್ತು. ಈ ಹಿನ್ನಲೆ ಎಸಿಬಿಯಲ್ಲಿ ಎಫ್ ಐಆರ್ ದಾಖಲಾಗಿತ್ತು.ಇಂದು ಮುಂಜಾನೆಯೇ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳುಸುಮಾರು ಎರಡು ಗಂಟೆಗಳ ಕಾಲ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಬೆಂಗಳೂರಿನ ಸಿಟಿಓ ಸೈಯದ್ ಮೊಹಮದ್ ಮನೆಯಲ್ಲಿ 3,35,300 ನಗದು ಹಣ,
384 ಗ್ರಾಂ ಚಿನ್ನಾಭರಣಗಳು, 1 ಸ್ವಿಫ್ಟ್ ಕಾರು, 1 ದ್ವಿಚಕ್ರ ವಾಹನ ಪತ್ತೆಯಾಗಿದೆ.ಕಾರು ಚಾಲಕ ಪಿ. ಕೃಷ್ಣಮೂರ್ತಿ ಮನೆಯಲ್ಲಿ2,100 ನಗರದು ಹಣ ಪತ್ತೆಯಾಗಿದ್ರೆ, ಮೈಸೂರಿನ ಸಿಟಿಐ ಸಿ. ಎಂ. ಯಶವಂತ್ ಮನೆಯಲ್ಲಿ 50 ಗ್ರಾಂ ಚಿನ್ನಾಭರಣಗಳು, 1 ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಗಿದೆ. ವಿವಿಧ ಸ್ವತ್ತುಗಳ ದಾಖಲಾತಿಗಳು ಪತ್ತೆಯಾಗಿವೆ.
Kshetra Samachara
07/04/2022 10:02 pm