ಬೆಂಗಳೂರು: ತಪಾಸಣೆ ನಡೆಸುವಾಗ ಅನುಮತಿಯಿಲ್ಲದೆ ಸಾರ್ವಜನಿಕರ ಮೊಬೈಲ್ ಗಳನ್ನು ಬಲವಂತವಾಗಿ ಕಸಿದುಕೊಂಡು ಪರಿಶೀಲಿಸುವುದು ಸರಿಯಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಪಾಸಣೆ ನಡೆಸುವಾಗ ಸುಖಾಸುಮ್ಮನೆ ಸಾರ್ವಜನರಿಂದ ಪೊಲೀಸರು ಮೊಬೈಲ್ ಕಸಿದು ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಶ್ನಿಸುತ್ತಿರುವ ದೂರುಗಳು ಕೇಳಿಬಂದಿತ್ತು. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ನಿಖಿಲ್ ಹೆಚ್ ಎಸ್ ಆರ್ ಲೇಔಟ್ ಬಳಿ ತಡರಾತ್ರಿ ಆಟೊ ಹತ್ತಿದ್ದರು. ಮಾರ್ಗ ಮಧ್ಯೆ ಆಟೊ ತಪಾಸಣೆ ನಡೆಸುವಾಗ ನನ್ನ ಮೊಬೈಲ್ ನ್ನು ಪೊಲೀಸರು ಕಸಿದುಕೊಂಡದ್ದಾರೆ. ಗೂಗಲ್ ಮಾಡಿ weed ಹಾಗೂ pot ಎಂಬ ಪದವನ್ನು ಸರ್ಚ್ ಮಾಡಿದ್ದಾರೆ.
ಬ್ರೌಸಿಂಗ್ ಈಸ್ಟ್ರಿಯಲ್ಲಿ ಏನು ಸಿಗದ ಕಾರಣ ಪೊಲೀಸರು ಮೊಬೈಲ್ ವಾಪಸ್ ಕೊಟ್ಟಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರ ಟ್ವೀಟರ್ ಗೆ ಟ್ಯಾಗ್ ಮಾಡಿದ್ದಾರೆ..ಇದಕ್ಕೆ ಪ್ರತಿಕ್ರಿಯಿಸಿ ಆಯುಕ್ತರು ಅನುಮತಿಯಿಲ್ಲದೆ ಸಾರ್ವಜನಿಕರ ಮೊಬೈಲ್ ಗಳನ್ನು ಬಲವಂತವಾಗಿ ಕಸಿದುಕೊಳ್ಳಬಾರದು..ಯಾರಾದರೂ ಅನಗತ್ಯವಾಗಿ ಪೊಲೀಸರು ಮೊಬೈಲ್ ತೆಗೆದುಕೊಂಡರೆ ಮಾಹಿತಿ ನೀಡುವಂತೆ ಟ್ವೀಟ್ ಮಾಡಿದ್ದಾರೆ.
Kshetra Samachara
04/04/2022 03:51 pm