ನೆಲಮಂಗಲ: : ಹಾಡ ಹಗಲೇ ಸಂಬಂಧಿಕರ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳನನ್ನ ನೆಲಮಂಗಲ ಟೌನ್ ಪೊಲೀಸ್ರು ಬಂಧಿಸಿದ್ದಾರೆ. ನೆಲಮಂಗಲದ ವಾಜರಹಳ್ಳಿಯ ಕೆಂಪರಾಜು ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮನೆಯ ಮೇಲುಗಡೆ ಕೆಂಪರಾಜು ಪತ್ನಿ ಕಸ ಗುಡಿಸುತ್ತಿದ್ದಾಗ ಬಂದ ಆರೋಪಿ ಹನುಮಂತರಾಜು ಸೀದಾ ಲಾಕರ್ ತೆಗೆದು ಲಾಕರ್‌ನಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿ ಎಸ್ಕೇಪ್ ಆಗಿದ್ದ. ಎಸ್ಕೇಪ್ ಆಗೋವಾಗ ಬಾಗಿಲಲ್ಲಿ ಬಿಟ್ಟಿದ್ದ ಚಪ್ಪಲಿಯನ್ನೇ ಮರೆತು ಹೋಗಿದ್ದ. ಇನ್ನೂ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ಕುಮಾರ್ ಅಂಡ್ ಟೀಂ ಘಟನೆ ನಡೆದ ಮೂರೇ ದಿನದಲ್ಲಿ ಆರೋಪಿ ಪತ್ತೆ ಮಾಡಿದ್ದಾರೆ. ಆರೋಪಿಯಿಂದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಹನುಮಂತ ಈ ಹಿಂದೆ ಕೂಡ ಹಲವು ಪ್ರಕರಣದಲ್ಲಿ ಭಾಗಿಯಾಗಿ ಅನೇಕ ಬಾರಿ ಜೈಲಿಗೆ ಹೋಗಿ ಬಂದಿದ್ದ. ಸದ್ಯ ನೆಲಮಂಗಲ ಪೊಲೀಸರು ಹನುಮಂತನನ್ನ ಮತ್ತೊಮ್ಮೆ ಜೈಲಿಗೆ ಕಳುಹಿಸಿದ್ದಾರೆ.
PublicNext
28/03/2022 07:36 pm