ಬೆಂಗಳೂರು: ಕ್ವಿಂಟಾಲ್ ಗಾಂಜಾವನ್ನು ಕೋರಮಂಗಲ ಪೊಲೀಸ್ರು ಸೀಜ್ ಮಾಡಿ ಐವರು ಗಾಂಜಾ ಪೆಡ್ಲರ್ಸ್ ನ ಅರೆಸ್ಟ್ ಮಾಡಿದ್ದಾರೆ. 40 ಲಕ್ಷ ಮೌಲ್ಯದ 102 ಕೆಜಿ 200 ಗ್ರಾ ಗಾಂಜಾ ಸೀಜ್ ಮಾಡಿರೋ ಎಸಿಪಿ ಸುಧೀರ್ ಹೆಗ್ಡೆ & ಟೀಂ ಅಂತರ್ ರಾಜ್ಯ ಗಾಂಜಾ ಡೀಲರ್ಸ್ ಗಳಾದ ರಮೇಶ್, ಶಿವರಾಜ್, ಮೂರ್ತಿ, ಮಂಜುನಾಥ್ ಮತ್ತು ಅಭಿಲಾಷ್ ನನ್ನು ಬಂಧಿಸಿದ್ದಾರೆ.
ಕೊಳ್ಳೇಗಾಲ ಮೂಲದ ರಮೇಶ್ ವಿಶಾಖಪಟ್ಟಣಂನಿಂದ ಗಾಂಜಾ ತರಿಸಿಕೊಳ್ತಿದ್ದ. ಟ್ರಕ್ ನಲ್ಲಿ ಬಂದ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕ್ ಮಾಡಿ, ಇಡೀ ಸಿಟಿಗೆ ಬೈಕ್ ನಲ್ಲೇ ಸಪ್ಲೈ ಮಾಡ್ತಿದ್ರು. ಖಚಿತ ಮಾಹಿತಿ ಮೇಲೆ ಕೋರಮಂಗಲ ಇನ್ಸ್ಪೆಕ್ಟರ್ ರವಿ ದಾಳಿ ನಡೆಸಿದ ಮೊದಲು ಓರ್ವ ಆರೋಪಿಯನ್ನ ಬಂಧಿಸಿದ್ರು. ನಂತರ ಹೆಚ್ಚಿನ ವಿಚಾರಣೆ ಮಾಡಿದಾಗ ಈ ಹಿಂದೆ ಕೂಡ ಗಾಂಜಾ ಪ್ರಕರಣದಲ್ಲಿ ರಮೇಶ್ ಅರೆಸ್ಟ್ ಆಗಿದ್ದ. ವಿಚಾರಣೆ ವೇಳೆ ರಮೇಶ್ ಸ್ವಗ್ರಾಮ ಚಾಮರಾಜನಗರದ ಪುಷ್ಪಪುರದಲ್ಲಿ ಗಾಂಜಾ ಶೇಖರಿಸಿಟ್ಟಿರೋದನ್ನ ಪೊಲೀಸ್ರಿಗೆ ತೋರಿಸಿದ್ದ.
ಸಿಟಿಯಲ್ಲಿ ಕೇಳೋ ಗಾಂಜಾ ಸಬ್ ಡೀಲರ್ಸ್ ಗೆ ಬೈಕ್ ಮೂಲಕ ಗಾಂಜಾ ಪ್ಯಾಕೇಟ್ ತಂದು ಕೊಡ್ತಿದ್ದ ರಮೇಶ್. ಕೆಆರ್ ಪುರ- ಕೋರಮಂಗಲ ಭಾಗದಲ್ಲಿ ತನ್ನ ಬ್ಯುಸಿನೆಸ್ ಮಾಡಿಕೊಂಡಿದ್ದ ರಮೇಶ & ಟೀಂ ಸದ್ಯ ಪೊಲೀಸ್ರ ಅತಿಥಿಯಾಗಿದ್ದಾರೆ.
- ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ʼಪಬ್ಲಿಕ್ ನೆಕ್ಸ್ಟ್ʼ
PublicNext
28/03/2022 08:21 am