ಬೆಂಗಳೂರು: ತಾಲೂಕಿನ ಗ್ರಾಮದ ಸಣ್ಣಪುಟ್ಟ ಅಂಗಡಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡುಲಾಗುತ್ತಿತ್ತು. ಈ
ಬಗ್ಗೆ ಗ್ರಾಮಸ್ಥ ರಿಂದ ಹಲವು ದೂರು ಬಂದ ಹಿನ್ನೆಲೆ ಎಚ್ಚೆತ್ತ ಪೊಲೀಸ್ರು ಅಕ್ರಮ ಮದ್ಯ ಮಾರಾಟ ಮಾಡ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ ಘಟನೆ ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಬಾಪೂಜಿನಗರದಲ್ಲಿ ನಡೆದಿದೆ.
ಬಾಪೂಜಿನಗರ ಗ್ರಾಮದ ನಿವಾಸಿ ಕುಮಾರ್ ಎಂಬಾತನ ಚಿಲ್ಲರೆ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟದ ಖಚಿತ ಮಾಹಿತಿ ಪಡೆದ ನೆಲಮಂಗಲ ಗ್ರಾಮಾಂತರ ಠಾಣಾ ಸಿಪಿಐ ರಾಜೀವ್ ನೇತೃತ್ವದಲ್ಲಿ ದಾಳಿ ನಡೆಸಿ ಅಂಗಡಿಯಲ್ಲಿದ್ದ 90 mlನ ಸುಮಾರು 23 ಮದ್ಯದ ಟೆಟ್ರಾ ಪ್ಯಾಕ್ ಜಪ್ತಿ ಮಾಡಿದ್ದಾರೆ.
ಅಲ್ಲದೆ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡ್ತಿದ್ದ ಕುಮಾರ್ ಮತ್ತು ಮದ್ಯ ಸಪ್ಲೈ ಮಾಡ್ತಿದ್ದ ಬಿಲ್ಲಿನಕೋಟೆ ವೆಂಕಟೇಶ್ವರ್ ಬಾರ್ ಮಾಲೀಕ ದಯಾನಂದ್ ಎಂಬಾತನ ಮೇಲೂ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
27/03/2022 04:06 pm