ಬೆಂಗಳೂರು: ಪ್ರೀತಿ ಅಂದ್ರೇನೆ ಹಾಗೆ.ಅದು ಯಾರಿಗೆ, ಯಾವಾಗ.ಅದ್ಹೇಗ್ ಆಗತ್ತೊ ಗೊತ್ತಾಗಲ್ಲ.ಕೆಲ ಪ್ರೀತಿ ಮದುವೆಯಾಗಿ ಜೀವನ ಕೊನೆಯಾಗೊವರೆಗೂ ಉಳಿದುಕೊಂಡ್ರೆ, ಇನ್ನೂ ಕೆಲ ಪ್ರೀತಿ ಅರ್ಧಕ್ಕೆ ಮುರಿದು ಬೀಳತ್ತೆ.ಇಷ್ಟಾದ್ರು ಓಕೆ. ಆದ್ರೆ ಮತ್ತೆ ಕೆಲವು ಪ್ರೀತಿ ಪ್ರೇಮಿಗಳನ್ನೇ ಬಲಿಪಡೆದುಕೊಳ್ಳತೆ.ಇಲ್ಲಾಗಿರೋದು ಕೂಡ ಅದೇ.ಜೀವನದ ಬಗ್ಗೆ ಕನಸು ಕಾಣ್ತಾ ಒಂದಾಗಿ ಬಾಳಬೇಕು ಅಂತಿದ್ದವರ ಬಾಳಲ್ಲಿ ವಿಧಿ ಆಟವಾಡಿದೆ.
ಫೋಟೋದಲ್ಲಿ ಕಾಣ್ತಿರೊ ಇವ್ರ ಹೆಸರು ಶಿರಿಶ್ ಚಂದ್ರ ಮತ್ತು ಚೇತನಾ. 20 ವರ್ಷದ ಶಿರಿಶ್ಚಂದ್ರ ಬೆಂಗಳೂರಿನ ಕ್ರಿಸ್ಟ್ ಜಯಂತಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಬಿಎ ವ್ಯಾಸಾಂಗ ಮಾಡ್ತಿದ್ದ.ಇನ್ನೂ 19 ವರ್ಷದ ಚೇತನಾ ಕಲ್ಯಾಣನಗರದಲ್ಲಿರುವ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಸಿಎ ಓದ್ತಾ ಇದ್ಳು.ಇಬ್ಬರೂ ಕೂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಣ್ಣಮಂಗಲದವ್ರು.ಇಬ್ಬರ ಮಧ್ಯೆ 5 ವರ್ಷದ ಹಿಂದೇಯೇ ಪ್ರೇಮಾಂಕುರವಾಗಿದೆ.ಆದ್ರೆ ಇಷ್ಟು ಸಣ್ಣ ವಯಸ್ಸಿಗೆ ಪ್ರೀತಿ ಪ್ರೇಮ ಎಲ್ಲಾ ಯಾಕೆ ಎಂದು ಕುಟುಂಬಸ್ಥರು ಬುದ್ಧಿ ಹೇಳಿದ್ರು. ಇಷ್ಟಕ್ಕೆ ಜೀವನ ಕೊನೆಯ ನಿರ್ಧಾರವನ್ನು ಪ್ರೇಮುಗಳು ತೆಗೆದುಕೊಂಡಿದ್ದಾರೆ.
ಹೊರಮಾವು ರೈಲ್ವೆ ಬ್ರಿಡ್ಜ್ ಬಳಿಯಲ್ಲಿ ಸಾವನ್ಮಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದಾರೆ. ಆದ್ರೆ ರೈಲು ಡಿಕ್ಕಿಯಾಗಿ ಸಾವನ್ನಿಪ್ಪಿರೋ ಬಗ್ಗೆ ಪೊಲೀಸ್ರಿಗೆ ಅನುಮಾನ ಇದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಆಗಿರುವ ಶಂಕೆಯನ್ನ ಪೊಲೀಸ್ರು ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರೊ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.
Kshetra Samachara
26/03/2022 09:21 pm