ಬೆಂಗಳೂರು: ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡೆನಲ್ಲಸಂದ್ರ ಬಳಿ ನಡೆಸಿದ್ದ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಹೇಳಿದ್ದಾರೆ.
ಮೃತ ವ್ಯಕ್ತಿ ಹಾಗೂ ಹೆಂಡತಿ ಕಳೆದ ಮೂರು ತಿಂಗಳ ಹಿಂದೆ ಚಿಕ್ಕ ಮಂಗಳೂರಿನಿಂದ ಬಂದು ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡೆ ನಲ್ಲಸಂದ್ರ ಬಳಿ ವಾಸವಾಗಿದ್ದರು. ಕೆಲಸ ಮುಗಿಸಿ ಮನೆಗೆ ಬರುವಾಗ ಗಂಡನ ಮೇಲೆ ಇದೇ ತಿಂಗಳ 16 ನೇ ತಾರೀಖಿನಂದು ಇಬ್ಬರು ಯುವಕರು ಬೈಕ್ ನಲ್ಲಿ ಬಂದು ಕಳ್ಳತನದ ಆರೋಪ ಹೊರಿಸಿ ಆತನ ಮೇಲೆ ಹಲ್ಲೆ ಮಾಡಿದರು. ಹಲ್ಲೆಗೊಳಗಾಗಿದ್ದ ವ್ಯಕ್ತಿ ಮುಂದಿನ ದಿನಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದಾನೆ.
ಸ್ಥಳೀಯರ ಮಾಹಿತಿಯ ಮೇರೆಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ 4 ಜನ ಯುವಕರ ಮಾಹಿತಿ ಲಭ್ಯವಾಗಿದ್ದು ಈ ನಾಲ್ಕು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನ ಪತ್ತೆ ಹಚ್ಚುಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಹೇಳಿದ್ದಾರೆ. ಇನ್ನು ಮೃತದೇಹವನ್ನು ಹೊರತೆಗೆದು ಎಸಿ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ವಂಶಿಕೃಷ್ಣ ಹೇಳಿದ್ದಾರೆ.
Kshetra Samachara
25/03/2022 03:18 pm