ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗುಟ್ಟಾಗಿ ಮೊಬೈಲ್ ಬಳಸುತ್ತಿದ್ದ ಬಗ್ಗೆ ಜಗಳ ಮಾಡಿದ ಗಂಡ: ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಹೆಂಡತಿ

ದೊಡ್ಡಬಳ್ಳಾಪುರ : ಹೆಂಡತಿಯ ಬಳಿ ಮೊಬೈಲ್ ಇದೆ ಅನ್ನೋ ವಿಷಯವೇ ಗಂಡನಿಗೆ ತಿಳಿದಿರಲಿಲ್ಲ. ಗಂಡನಿಗೆ ಗೊತ್ತಿಲ್ಲದಂತೆ ಮೊಬೈಲ್ನಲ್ಲಿ ಯಾರ ಬಳಿಯೋ ಮಾತುಕತೆಗಳೂ ನಡೆಯುತ್ತಿತ್ತು. ಕೊನೆಗೆ ಗಂಡನಿಗೆ ವಿಚಾರ ಗೊತ್ತಾದ್ಮೇಲೆ ಜಗಳ ನಡೆದು ಆ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ. 35 ವರ್ಷದ ಹನುಮಯ್ಯ ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ಈತನ ತಲೆ ಮೇಲೆ ಕಲ್ಲು ಎತ್ತಾಕಿ ಹೆಂಡತಿ ಭಾಗ್ಯಲತಾ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಬೆಳಗ್ಗೆ ಪಕ್ಕದ ಮನೆಯ ಹುಡುಗಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಕೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹನುಮಯ್ಯನ ಮೃತ ದೇಹ , ಹಾಗೂ ಶವದ ಪಕ್ಕದಲ್ಲೇ ಹೆಂಡತಿ ಭಾಗ್ಯಲತಾ ಕುಳಿತಿದ್ದನ್ನ ನೋಡಿದ್ದಾಳೆ.

ಕುಡಿತದ ದಾಸನಾಗಿದ್ದ ಹನುಮಯ್ಯ ಯಲಹಂಕದ ಅಟ್ಟೂರಿನ ಭಾಗ್ಯಲತಾಳನ್ನ 14 ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಇಬ್ರು ಗಂಡುಮಕ್ಕಳೂ ಇದ್ದಾರೆ. ಮಕ್ಕಳು ಹಾಸ್ಟೆಲ್ ನಲ್ಲಿದ್ದು, ಮನೆಯಲ್ಲಿ ಗಂಡ ಹೆಂಡತಿ ಮಾತ್ರ ವಾಸವಾಗಿದ್ರು. ಗಂಡ ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿದ್ದು, ಗಂಡನಿಂದ ಸ್ವಲ್ಪ ದಿನ ದೂರವಾಗಿದ್ದ ಭಾಗ್ಯಲತಾ ಇತ್ತೀಚೆಗೆ ಗಂಡನ ಮನೆಗೆ ಬಂದಿದ್ಳು. ಹನುಮಯ್ಯನ ಕೊಲೆಗೆ ಅನೈತಿಕ ಸಂಬಂಧದ ಸಂಶಯ ಇದೆ. ಆರೋಪಿ ಭಾಗ್ಯಲತಾಳನ್ನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆಕೆಯ ಮೊಬೈಲ್ ನ್ನು ವಶಕ್ಕೆ ಪಡೆಯಲಾಗಿದೆ. ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ.

Edited By : Manjunath H D
PublicNext

PublicNext

23/03/2022 07:09 pm

Cinque Terre

35.97 K

Cinque Terre

1

ಸಂಬಂಧಿತ ಸುದ್ದಿ