ಬೆಂಗಳೂರು: ರಾಮಮೂರ್ತಿ ನಗರ ಪೊಲೀಸರ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಬರೋಬ್ಬರಿ 80 ಲಕ್ಷ ಮೌಲ್ಯದ ರಕ್ತಚಂದನ ದುರ್ಬಳಕೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಮೊದಲಿಗೆ ಆರೋಪ ನೋಡುವುದಾದ್ರೆ, ಆರ್‌ಟಿಐ ಕಾರ್ಯಕರ್ತರೊಬ್ಬರು ಈ ಆರೋಪ ಮಾಡಿದ್ದು ಕಳೆದ ಅಕ್ಟೋಬರ್ ನಲ್ಲಿ ಪ್ರಕರಣವೊಂದರ ಸಂಬಂಧ ರಾಮಮೂರ್ತಿನಗರ ಪೊಲೀಸರು ಮಂಗಳೂರಿಗೆ ಹೋಗಿದ್ರು. ಈ ವೇಳೆ ಇಲ್ಲಿನ ಬೆಳ್ತಂಗಡಿ ಸಮೀಪದ ವೆನೂರು ಫಾರೆಸ್ಟ್ ಬಳಿ ರಕ್ತ ಚಂದನ ಸಾಗಿಸುತ್ತಿದ್ದ ದುಷ್ಕರ್ಮಿಗಳು ಪೊಲೀಸರ ಕಣ್ಣಿಗೆ ಬಿದ್ದಿದ್ದರು. ಪೊಲೀಸರು ಮಪ್ತಿಯಲ್ಲಿದ್ದ ಕಾರಣ ಪೊಲೀಸರು ಮತ್ತು ದುಷ್ಕರ್ಮಿಗಳ ಮಧ್ಯ ಮಾರಾಮಾರಿಯಾಗಿ ಈ ವೇಳೆ ಇಬ್ಬರನ್ನು ಬಂಧಿಸಿ ಕೈಗೆ ಪೊಲೀಸರು ಹ್ಯಾಂಡ್ ಕಪ್ ಕೂಡ ಹಾಕಿದ್ರು ಎಂದು ಆರೋಪಿಸಲಾಗಿದೆ.
ಆದ್ರೆ ದುಷ್ಕರ್ಮಿಯೊಬ್ಬ ಪೊಲೀಸರ ಮೇಲೆಯೇ ಫೈರ್ ಮಾಡಿ ಆರೋಪಿಗಳು ರಕ್ತ ಚಂದನ ಬಿಟ್ಟು ಎಸ್ಕೇಪ್ ಆಗಿದ್ದರು ಎನ್ನಲಾಗ್ತಿದೆ. ನಂತರ ಆರೋಪಿಗಳು ಬಿಟ್ಟು ಹೋದ ರಕ್ತ ಚಂದನವನ್ನ ಪೊಲೀಸರು ಮೇಲಾಧಿಕಾರಿಗಳ ಗಮನಕ್ಕೆ ಬಾರದೇ ಅವುಗಳನ್ನ ಸಾಗಿಸಿ ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸದ್ಯ ಕಮಿಷನರ್‌ಗೆ ದೂರು ನೀಡಿದ್ದು ಕಮಿಷನರ್ ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ.
ಆದ್ರೆ ಹಿರಿಯ ಅಧಿಕಾರಿಗಳು ಪಬ್ಲಿಕ್ ನೆಕ್ಸ್ಟ್‌ಗೆ ನೀಡಿದ ಮಾಹಿತಿ ಪ್ರಕಾರ. ಅಕ್ಟೋಬರ್‌ನಲ್ಲಿ ರಾಮಮೂರ್ತಿ ನಗರ ಕ್ರೈಂ ಟೀಂ ಗಾಂಜ ಕೇಸ್‌ನಲ್ಲಿ ಮಂಗಳೂರಿಗೆ ತೆರಳಿದ್ರು. ಪೊಲೀಸರು ಗಾಂಜಾ ಸೀಜ್ ಮಾಡಲು ಗ್ರಾಹಕರ ರೀತಿಯಲ್ಲಿ ಪೆಡ್ಲರ್ಸ್ ಬಳಿ ಹೋಗಿದ್ರು. ಈ ಪೆಡ್ಲರ್ಸ್‌ಗೆ ಅನುಮಾನ ಬಂದು ಪೊಲೀಸರಿಂದ ತಪ್ಪಿಸಿಕೊಂಡಿದ್ರು. ಈ ವೇಳೆ ಸ್ಪಾಟ್‌ನಲ್ಲಿ ಗಾಂಜಾ ಬದಲು 162kg ರೆಡ್ ಸ್ಯಾಂಡಲ್ ಸೀಜ್ ಆಗಿತ್ತು. ಸೀಜ್ ಆದ ರೆಡ್ ಸ್ಯಾಂಡಲ್ ರಾಮಮೂರ್ತಿ ನಗರ ಪೊಲೀಸ್ರು ಕೇಸ್ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ 750 kg ರೆಡ್ ಸ್ಯಾಂಡಲ್ ಕಟ್ಟಿಗೆಗಳನ್ನ ಇನ್ನೋವಾ ಕಾರಿನಲ್ಲಿ ಕ್ಯಾರಿ ಮಾಡೋದು ಕಷ್ಟ. ಜೊತೆಗೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಈ ಆರೋಪಿಗಳ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಅನುಮಾನವಿದ್ದು ಆ ಬಗ್ಗೆ ತನಿಖೆ ನಡೆಸುತ್ತಿರೋದಾಗಿ ಹಿರಿಯ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
PublicNext
19/03/2022 03:59 pm