ಬೆಂಗಳೂರು: ಸೈಕೋಪಾತ್ ಒಬ್ಬ, ರಸ್ತೆಬದಿ ಮಲಗಿದ್ದ ವೃದ್ಧರೊಬ್ಬರ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಹೇಯ ಕೃತ್ಯ ನಗರದ ಹೆಗ್ಗನಹಳ್ಳಿಯಲ್ಲಿ ನಡೆದಿದೆ.
ಮಾರ್ಚ್ 15ರ ಮುಂಜಾವ ದುರ್ಘಟನೆ ನಡೆದಿದ್ದು, ಖಾಸಗಿ ಕಂಪೆನಿಯಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಕೊಲೆಯಾದವರು. ಬಾರ್ ನಲ್ಲಿ ಕಂಠಪೂರ್ತಿ ಕುಡಿದು ಟೈಟಾಗಿದ್ದ ಕೃಷ್ಣಪ್ಪರನ್ನು ಸ್ಥಳೀಯರು ಅಂಗಡಿಯೊಂದರ ಮುಂದೆ ಮಲಗಿಸಿದ್ದರು.
ಮಧ್ಯರಾತ್ರಿ ಕೃಷ್ಣಪ್ಪ ಮಲಗಿದ್ದ ಜಾಗಕ್ಕೆ ಆರೋಪಿ ಸೈಕೋ ಬಂದಿದ್ದಾನೆ. ಮಲಗಿದ್ದ ವ್ಯಕ್ತಿಯ ತಲೆ ಮೇಲೆಯೇ ಸಿಮೆಂಟ್ ಇಟ್ಟಿಗೆಯಿಂದ ಎರಡು ಬಾರಿ ಜೋರಾಗಿ ಹೊಡೆದು, ನಂತರ ಕೃಷ್ಣಪ್ಪರ ಜೇಬಿನಲ್ಲಿ ಹಣಕ್ಕಾಗಿ ಹುಡುಕಾಡಿದ್ದಾನೆ. ಆದ್ರೆ, ಜೇಬಿನಲ್ಲಿ ಏನೂ ಸಿಗದೆ ಇರುವ ಕಾರಣ ಎಸ್ಕೇಪ್ ಆಗಿದ್ದಾನೆ. ಈ ಕುಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ರಕ್ತಸಿಕ್ತವಾಗಿ ಬಿದ್ದಿದ್ದ ಕೃಷ್ಣಪ್ಪರನ್ನು ಮುಂಜಾನೆ ಸ್ಥಳೀಯರು ಪೊಲೀಸ್ರ ನೆರವಿನಿಂದ ಆಸ್ಪತ್ರೆಗೆ ಸೇರಿಸಿದ್ರು. ಆದ್ರೆ, ಚಿಕಿತ್ಸೆ ಫಲಿಸದೆ ಕೃಷ್ಣಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಜಗೋಪಾಲನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
18/03/2022 10:14 pm