ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೈಟ್ ಮಾರಾಟದಲ್ಲಿ ಭಾರೀ ಗೋಲ್ ಮಾಲ್ : ನಕಲಿ ದಾಖಲೆ ಸೃಷ್ಟಿಸಿ ನೂರಾರು ಕೋಟಿ ಗುಳುಂ, 8 ಮಂದಿ ಅರೆಸ್ಟ್..

ಕರೀಂಲಾಲ್ ತೆಲಗಿಯ ಬಹುಕೋಟಿ ಛಾಪಾಕಾಗದ ಹಗರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿತ್ತು. ಅದೇ ರೀತಿ ನಕಲಿ ಛಾಪಾ ಕಾಗದ ಮತ್ತು ಸೀಲ್ಗಳನ್ನ ಬಳಸಿ ನೂರಾರು ಕೋಟಿ ಗುಳುಂ ಮಾಡಿರುವ ಪ್ರಕರಣ ಪತ್ತೆಯಾಗಿದೆ. 2000 ದ ಇಸವಿಗೂ ಹಿಂದಿನ ಖಾಲಿ ನಿವೇಶನಗಳನ್ನೆ ಟಾರ್ಗೆಟ್ ಮಾಡಿ ಗುಳುಂ ಮಾಡ್ತಿದ್ದ ರೌಡಿ ಗ್ಯಾಂಗಿಗೆ ಈಶಾನ್ಯ ವಿಭಾಗದ ಪೊಲೀಸರು ಜೈಲುಮುಖ ತೋರಿಸಿದ್ದಾರೆ.

ಬೆಂಗಳೂರಲ್ಲಿ ಮನೆ ಕಟ್ಟಿಸಬೇಕು ಅನ್ನೋದು ಹಲವರ ಕನಸು. ಅದ್ಕಾಗಿ ಕಡಿಮೆ ಬೆಲೆಗೆ ಎಲ್ಲಿ ಸೈಟ್ ಸಿಗುತ್ತೆ ಅಂತ ಹುಡುಕ್ತಾ ಇರ್ತಾರೆ. ಅಂತಹವರನ್ನೇ ಟಾರ್ಗೆಟ್ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡ್ತಿದ್ದ ಗ್ಯಾಂಗ್ನ ಪೊಲೀಸರು ಸೆರೆಹಿಡಿದಿದ್ದಾರೆ. ಯಲಹಂಕ ತಾಲೂಕಿನ ಯಲಹಂಕ, ಯಲಹಂಕ ಉಪನಗರ, ಚಿಕ್ಕಬೊಮ್ಮಸಂದ್ರ, ಜ್ಯುಡಿಷಿಯಲ್ ಲೇಔಟ್, ಚಿಕ್ಕಜಾಲ ಸುತ್ತಮುತ್ತಾ ಈ ಖದೀಮರ ಕೈಚಳಕ ಜೋರಾಗಿದೆ. 1980, 1990 ಮತ್ತು 2000ಕ್ಕು ಹಿಂದಿನ‌ ವಾರಸುದಾರರಿಲ್ಲದ, ಗಿಡಗಂಟೆ ಬೆಳೆದುಕೊಂಡು ಖಾಲಿ ಇರುವ ಸೈಟ್ಗಳನ್ನ ಇವರು ವ್ಯವಹಾರಕ್ಕೆ ಬಳಸಿಕೊಳ್ತಿದ್ರು. ಆಧಾರ್ ಕಾರ್ಡ್, ಖಾತಾ, E.C. ಕ್ರಯ , ಸೇಲ್ ಡೀಡ್, ರಿಜಿಸ್ಟರ್ ಡೀಡ್ ಹೀಗೆ ಎಲ್ಲಾ ದಾಖಲೆಗಳನ್ನು ಸೃಷ್ಟಿಸಿ ಅಸಲಿಯೇ ನಾಚುವಂತೆ ನಕಲು ಮಾಡ್ತಿದ್ದರು. ಯಾರಿಗೂ ಅನುಮಾನ‌ ಬಾರದಂತೆ ನಕಲಿ ಸೈಟ್ಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ವಿದ್ಯಾರಣ್ಯಪುರ ಪೊಲೀಸ್ ಪೇದೆಯೇ ಇವರ ನಕಲಿ‌ ಜಾಲಕ್ಕೆ ಬಿದ್ದು ಮೋಸಹೋಗಿದ್ದಾರೆ ಅಂದ್ಮೇಲೆ ಇನ್ನು ಸಾಮಾನ್ಯ ಜನರ ಗತಿಯೇನು..!?

ರಿಯಲ್ ಎಸ್ಟೇಟ್ ಚಟುವಟಿಕೆ ಜೊತೆ ಸ್ಟಾಂಪ್ ವೆಂಡರ್ ಹಾಗು ಬ್ರೋಕರ್ ಕೆಲಸ ಮಾಡ್ತಿದ್ದ ಆರೋಪಿಗಳಾದ ಪ್ರದೀಪ್ ಅಲಿಯಾಸ್ ಪಾಯಿಸನ್ ಪ್ರದೀಪ್, ಧರ್ಮಲಿಂಗಂ, ಮಂಜುನಾಥ್, ಯಾರಬ್, ಅಬ್ದುಲ್ ಘನಿ, ಶಬಾನ‌ಬಾನು, ರಾಮಯ್ಯ ಅಲಿಯಾಸ್ ಪಾಯಿಸನ್ ರಾಮನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ಆರೋಪಿಗಳ ಜೊತೆ ಯಲಹಂಕ ಸಬ್ ರಿಜಿಸ್ಟರ್ ಕಚೇರಿಯ‌ ಸಿಬ್ಬಂದಿ ಕುಮ್ಮಕ್ಕಿನ ಬಗ್ಗೆಯೂ ಅನುಮಾನ‌ ಮೂಡಿದೆ. ಈ ಖದೀಮರಿಂದ ದಂಧೆಗೆ ಬಳಸುತ್ತಿದ್ದ 2130 ನಕಲಿ ಛಾಪಾ ಕಾಗದ, ಯಲಹಂಕ ಸಬ್ ರಿಜಿಸ್ಟರ್ ಕಚೇರಿಯ 25ಕ್ಕು ಹೆಚ್ಚು ಸೀಲುಗಳು, ಟೈಪ್ ರೈಟರ್ ಯಂತ್ರ ಮತ್ತು ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ..

Edited By : Shivu K
PublicNext

PublicNext

15/03/2022 06:26 pm

Cinque Terre

29.66 K

Cinque Terre

1

ಸಂಬಂಧಿತ ಸುದ್ದಿ