ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಾರದಲ್ಲಿ ಸಪ್ಲೈ ಆಗ್ತಿದ್ದ ಡ್ರಗ್ಸ್ ಸೀಜ್

ಬೆಂಗಳೂರು: ಎನ್‌ಸಿಬಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಸಿಂಥೆಟಿಕ್ ಡ್ರಗ್ ಸೀಜ್ ಮಾಡಿದ್ದಾರೆ.

ನ್ಯೂಜಿಲ್ಯಾಂಡ್‌ಗೆ ಅಕ್ರಮವಾಗಿ ಸಾಗಟ ಮಾಡುತ್ತಿದ್ದ ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. 1 ಕೆಜಿ 970 ಗ್ರಾಂ ಸ್ಯೂಡೋಫೆಡ್ರಿನ್ ಡ್ರಗ್ಸ್ ಪತ್ತೆಯಾಗಿದ್ದು, ಮೆಟಲ್ ದಾರದ ಉಂಡೆಗಳಲ್ಲಿ ಸಿಂಥೆಟಿಕ್ ಡ್ರಗ್ ಇಟ್ಟು ಕೋರಿಯರ್ ಮೂಲಕ‌ ಇಂಡಿಯಾಗೆ ಸಪ್ಲೈ ಮಾಡಲಾಗುತ್ತಿತ್ತು. ಗುಪ್ತಚರ ಅಧಿಕಾರಿಗಳ ಮಾಹಿತಿ‌ ಹಿನ್ನಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿ ಒಬ್ಬ ದಕ್ಷಿಣ ಆಫ್ರಿಕಾದ ಪ್ರಜೆ ಮತ್ತು ಸ್ಥಳೀಯ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮೆಟಾಲಿಕ್ ವೈರ್‌ಗಳನ್ನ ಸುತ್ತಿಡುವ ಮೆಟಲ್ ಹಿಂದೆ ಬಚ್ಚಿಟ್ಟು ಪಾರ್ಸಲ್ ರೆಡಿ ಮಾಡಿದ್ದ ಪೆಡ್ಲರ್ ಪೆಡ್ಲಿಂಗ್‌ಗೆ ಖತರ್ನಾಕ್ ಪ್ಲಾನ್ ಮಾಡಿದ್ದರು. ಸದ್ಯ 1.97 ಕೆಜಿ ಸಿಂಥೆಟಿಕ್ ಡ್ರಗ್ ಸೀಜ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

13/03/2022 03:29 pm

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ