ಬೆಂಗಳೂರು: ತಾಯಿ ಬೈದಿದಕ್ಕೆ ಮಗ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಸುಂಕದಕಟ್ಟೆಯ ಶ್ರೀನಿವಾಸ ನಗರದಲ್ಲಿ ನಡೆದಿದೆ.
ಸಂಜಯ್(22) ಆತ್ಮಹತ್ಯೆಗೆ ದುಋದೈವಿಯಾಗಿದ್ದಾನೆ. ಕಳೆದ ಮೂರು ದಿನಗಳಿಂದ ಮಗ ಸಂಜಯ್ ಮನೆಗೆ ಬಂದಿರಲಿಲ್ಲ. ಅಲ್ಲದೆ ಯಾವುದೇ ಕೆಲಸಕ್ಕೆ ಹೋಗದೇ ಸಂಜಯ್ ಅಲೆದಾಡುತ್ತಿದ್ದ. ಹೀಗಾಗಿ ತಂದೆ ತಾಯಿ ಮಗನಿಗೆ ಬೈದು ಬುದ್ಧಿ ಹೇಳ್ತಿದ್ರು. ಇದರಿಂದಾಗಿ ತಾಯಿಯನ್ನೇ ಬೈದು ಕತ್ತು ಹಿಸುಕೋದಕ್ಕೆ ಹೋಗಿದ್ದ ಮಗ ಸಂಜಯ್. ಈ ವೇಳೆ ತಂದೆ ತಡೆದು ಮಗನಿಗೆ ಒಂದು ಏಟು ಕೂಡ ಒಡೆದಿದ್ದರು. ಎಲ್ಲಾ ಬೈದಿದ್ದಾರೆ ಎಂದು ಬೇಜರಾಗಿದ್ದ ಸಂಜಯ್ ರಾತ್ರಿ ಮನೆಯಲ್ಲಿ ಎಲ್ಲಾ ಮಲಗಿದ ಮೇಲೆ ನೇಣಿಗೆ ಶರಣಾಗಿದ್ದಾನೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಅಡಿ ಪ್ರಕರಣ ದಾಖಲಾಗಿದೆ.
Kshetra Samachara
13/03/2022 01:13 pm