ಬೆಂಗಳೂರು: 22 ನೇ ವಯಸ್ಸಿಗೆ ನಾಲ್ಕು ಬಾರಿ ಜೈಲಿಗೆ ಹೋಗಿ ಬಂದ್ರು ಐದನೇ ಬಾರಿ ಕಳ್ಳತನ ಮಾಡಿ ಮತ್ತೆ ಕೆಂಗೇರಿ ಪೊಲೀಸರಿಗೆ ಲಾಕ್ ಆದ ನಟೋರಿಯಸ್ ಮೊಬೈಲ್ ಸ್ನ್ಯಾಚರ್ ಆರೋಪಿ ಅರ್ಬಾಜ್ ಖಾನ್ ನನ್ನ ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಗಾಂಜಾ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೊಬೈಲ್ ಕಿತ್ತು ಪರಾರಿಯಾಗುತ್ತಿದ್ದ ಆರೋಪಿ ಒಂಟಿಯಾಗಿರುವವರನ್ನೆ ಹೆಚ್ಚು ಟಾರ್ಗೆಟ್ ಮಾಡ್ತಿದ್ದ.ಬ್ಲ್ಯಾಕ್ ಪಲ್ಸರ್ ಬೈಕ್ ನಲ್ಲಿ ಬಂದು ಮೊಬೈಲ್ ಕಿತ್ತು ಪರಾರಿಯಾಗುತ್ತಿದ್ದ ಆರೋಪಿ ಅರ್ಬಾಜ್ ಖಾನ್ ನನ್ನ ಪೊಲೀಸರು ಬಂಧಿಸಿ, ಈತನಿಂದ ನಾಲ್ಕು ಲಕ್ಷ ಮೌಲ್ಯದ ಮೂರು ಬೈಕ್ ಹಾಗೂ ಮೊಬೈಲ್ ಫೋನ್ ಗಳನ್ನ ಕೆಂಗೇರಿ ಪೊಲೀಸ್ರು ಸೀಜ್ ಮಾಡಿದ್ದಾರೆ.
ಆರೋಪಿಯ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು,ಪ್ರತ್ಯೇಕ 7 ಪ್ರಕರಣದಲ್ಲಿ ಭಾಗಿಯಾಗಿರೊ ಬಗ್ಗೆ ಆರೋಪಿ ಬಾಯಿ ಬಿಟ್ಟಿದ್ದಾನೆ.
Kshetra Samachara
12/03/2022 12:11 pm