#Sarvagnanagar
ಬೆಂಗಳೂರು: ಆ್ಯಪ್ ಮೂಲಕ ವಿದೇಶಿ ಮಹಿಳೆಯರನ್ನ ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಆ್ಯಪ್ ಮೂಲಕ ಗಿರಾಕಿಗಳನ್ನ ಹುಡುಕಿ ವಿದೇಶಿ ಮಹಿಳೆಯರನ್ನ ಸಪ್ಲೈ ಮಾಡ್ತಿದ್ದ ಓರ್ವ ವಿದೇಶಿ ಮಹಿಳೆಯನ್ನ ಸಿಸಿಬಿ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಉಗಾಂಡ ಮೂಲದ ಮಹಿಳೆಯರನ್ನ ಇಟ್ಟುಕೊಂಡು ಸೆಕ್ಸ್ ರಾಕೇಟ್ ನಡೆಸ್ತಿದ್ದ ವಿದೇಶಿ ಮಹಿಳೆ ಲೊಕಾಂಟೋ ಆ್ಯಪ್ ನಲ್ಲಿ ಗಿರಾಕಿಗಳನ್ನ ಹುಡುಕ್ತಿದ್ದಳು.
ಸಿಸಿಬಿ ದಾಳಿ ವೇಳೆ ಓರ್ವ ಮಹಿಳಾ ಆರೋಪಿಯನ್ನು ಬಂಧಿಸಲಾಗಿದ್ದು ಮತ್ತೋರ್ವ ಆರೋಪಿತೆ ಎಸ್ಕೇಪ್ ಆಗಿದ್ದಾಳೆ. ಆರೋಪಿತೆ ರಾಮಮೂರ್ತಿನಗರದ ಮನೆಯೊಂದರಲ್ಲಿ ಸೆಕ್ಸ್ ರಾಕೇಟ್ ನಡೆಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ದಾಳಿ ನಡೆಸಿದ್ದಾರೆ.
PublicNext
11/03/2022 02:54 pm