ಬೆಂಗಳೂರು: ಮೂರು ತಿಂಗಳ ಗರ್ಭಿಣಿ ಪತ್ನಿ ಮೈ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ಬೈಯಪ್ಪನ ಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಪತ್ನಿ ಮೀನಾ ತೀವ್ರ ಸುಟ್ಟಗಾಯಗಳಿಂದ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಮೊದಲ ಗಂಡ ವಿಜಯಕಾಂತ್ ನಿಧನದ ನಂತರ ಮೀನಾ ಬಾಬುನಾ ಎರಡನೇ ಮದುವೆಯಾಗಿದ್ಳು. ಮೂರು ಮಕ್ಕಳೊಂದಿಗೆ ಮೀನಾ ಬಾಬು ಜೊತೆಗೆ ವಾಸವಿದ್ಳು. ಕೆಲ ತಿಂಗಳ ಹಿಂದಷ್ಟೇ ಬಾಬು ಜೊತೆ ಬೈಯಪ್ಪನಹಳ್ಳಿಯ ಪುಟ್ಟಪ್ಪ ಬಿಲ್ಡಿಂಗ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.
ಕುಡಿತದ ದಾಸನಾಗಿದ್ದ ಬಾಬು ಪ್ರತಿದಿನ ಕುಡಿದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅಲ್ಲದೆ ಕುಡಿಯಲು ಹಣ ನೀಡುವಂತೆ ಮೀನಾಳನ್ನು ಪೀಡಿಸುತ್ತಿದ್ದ. ಗಂಡನ ಕಿರುಕುಳಕ್ಕೆ ರೋಸಿಹೋಗಿದ್ದ ಮೀನಾ ಡೀಸೆಲ್ ಮೈ ಮೇಲೆ ಎರಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗಂಡನಿಗೆ ಬೆದರಿಸಿದ್ದಳು. ಆಗ ಬಾಬು ನೀನ್ಯಾಕೆ ಸಾಯ್ತೀಯಾ. ನಾನೇ ಸಾಯಿಸುವೆ ಎಂದು ಡೀಸೆಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ. ಸ್ಥಳೀಯರ ನೆರವಿನಿಂದ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
PublicNext
11/03/2022 12:43 pm