ಬೆಂಗಳೂರು: ವೃದ್ಧರೊಬ್ಬರ ಗಮನ ಬೇರೆಡೆ ಸೆಳೆದು ಹಣ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಟಿಎಂ ಲೇಔಟ್ ನಿವಾಸಿ ಕೃಷ್ಣಪ್ಪ ಎಂಬವರು ಅಪರಿಚಿತ ವ್ಯಕ್ತಿಯ ದುಷ್ಕೃತ್ಯಕ್ಕೆ ಮೋಸ ಹೋಗಿದ್ದಾರೆ.
ಇಂದು ಮಧ್ಯಾಹ್ನ ಕೃಷ್ಣಪ್ಪ ಪೋಸ್ಟ್ ಆಫೀಸ್ ನಿಂದ 20,000 ರೂ. ಪಡೆದು ಹೊರಬಂದಿದ್ದಾರೆ. ತಾವು ಡ್ರಾ ಮಾಡಿದ ಹಣವನ್ನು ತಮ್ಮ ಸ್ಕೂಟರ್ ನಲ್ಲಿ ಇಡಲು ಮುಂದಾಗಿದ್ದಾರೆ. ಈ ವೇಳೆ ಅಪರಿಚಿತನೊಬ್ಬ ಕೃಷ್ಣಪ್ಪರನ್ನು ಪೋಸ್ಟ್ ಆಫೀಸ್ ಸಿಬ್ಬಂದಿ ಕರೆಯುತ್ತಿದ್ದಾರೆ ಎಂದು ಹೇಳಿದ್ದಾನೆ.
ಖದೀಮನ ಮಾತನ್ನು ನಂಬಿದ ಕೃಷ್ಣಪ್ಪ ಪೋಸ್ಟ್ ಆಫೀಸ್ ಕಡೆ ಮುಖ ಮಾಡಿದ್ದಾರೆ. ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಕಳ್ಳ, ಕ್ಷಣಮಾತ್ರದಲ್ಲಿ ಸ್ಕೂಟರ್ ನಲ್ಲಿದ್ದ 20,000 ನಗದು ಎಗರಿಸಿ ಪರಾರಿಯಾಗಿದ್ದಾನೆ. ಸದ್ಯ, ಘಟನೆ ಸಂಬಂಧ ಕೃಷ್ಣಪ್ಪ ಬಿಟಿಎಂ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪೋಸ್ಟ್ ಆಫೀಸ್ ನ ಸಿಸಿ ಕ್ಯಾಮೆರಾ ಪರಿಶೀಲಿಸಿ, ತನಿಖೆ ಮುಂದುವರಿಸಿದ್ದಾರೆ.
PublicNext
09/03/2022 11:00 pm