ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹಸು ಕಳ್ಳರ ಕೈಚಳಕ ಹೆಚ್ಚಾಗ್ತಿದೆ. ಹಸು ಮೋರಿಗೆ ಬಿದ್ರು ಬಿಡದ ಕ್ರೂರಿಗಳು ಹಸುವನ್ನು ಟೆಂಪೋದಲ್ಲಿ ತುಂಬಿಕೊಂಡು ಹೋಗಿದ್ದಾರೆ.
ಮನೆಯ ಪಕ್ಕದ ಶೆಡ್ ನಲ್ಲಿ ಕಟ್ಟಿದ್ದ ಹಸುವನ್ನ ಮಧ್ಯ ರಾತ್ರಿ ಬಂದು ಕಳ್ಳರು ಕದ್ದು ಹೋಯ್ದಿದ್ದಾರೆ.
ನಗರದ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಕಳೆದ 8 ರಂದು ಈ ಘಟನೆ ನಡೆದಿದ್ದು,ಮೂವರು ಬಂದು ಹಸು ಕಳ್ಳತನ ಮಾಡಿದ್ದಾರೆ.ಮುನಿರಾಜು ಎಂಬುವವರಿಗೆ ಸೇರಿದ ಹಸು ಇದಾಗಿದ್ದು ಶೆಡ್ ನಲ್ಲಿ ಕಟ್ಟಿದ್ದ ಹಸುವನ್ನೆ ಕದ್ದು ಪರಾರಿಯಾಗಿದ್ದಾರೆ.
ಸುಮಾರು 8 ಎಮ್ಮೆ ಹಾಗೂ 4 ಹಸುವನ್ನ ಸಾಕ್ತಿದ್ದ ಕುಟುಂಬ ಸದ್ಯ ನಲವತ್ತು ಸಾವಿರ ಬೆಲೆ ಬಾಳುವ ಹಸು ಕಳೆದು ಕೊಂಡು ಕಂಗಾಲಾಗಿದೆ. ಆರೋಪಿಗಳು ಹಸುವನ್ನ ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಸಿಸಿಟಿವಿ ಆಧರಿಸಿ ಹಸು ಕಳ್ಳರಿಗಾಗಿ ಪೊಲೀಸರಿಂದ ಶೋಧ ನಡೆಸಿದ್ದಾರೆ.
PublicNext
09/03/2022 06:02 pm