ಬೆಂಗಳೂರು: ಜೈಲಲ್ಲಿ ಪರಿಚಯವಾಗಿ ಸ್ನೇಹ. ಬೇಳಸಿಕೊಂಡಿದ್ದ ಸ್ನೇಹಿತರು ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ರು. ಕರಾಟೆ ಸೀನಾ, ಕೊಕ್ಕರೆ ಸತೀಶ ಹಾಗೂ ತೇಜಸ್, ಇವರ ಜೀವನ ಐಷಾರಾಮಿಯ ಶೋಕಿ ಬದುಕು. ಇನ್ನು ಇದಕ್ಕೆ ಹಣ ಹೊಂದಿಸಲು ಕಂಡ ಕಂಡವರ ಮನೆಗೆ ಕನ್ನ ಹಾಕ್ತಿದ್ರು. ಕಳೆದ ಮೂರು ವರ್ಷದಲ್ಲಿ ಸಾಲು ಸಾಲು ಮನೆಗಳ್ಳತನ ಮಾಡಿದ ಈ ಕದೀಮರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಸಾಲು ಸಾಲು ಚಿನ್ನಭರಣ ಖತರ್ನಾಕ್ ಗ್ಯಾಂಗ್ ನಿಂದ ವಶ ಪಡಿಸಿಕೊಂಡ ಮಾಲುಗಳು.
ನೈಟ್ ಆದ್ರೆ ಸಾಕು ನಗರದ ಏರಿಯಾಗಳಿಗೆ ಎಂಟ್ರಿ ಕೊಡ್ತಿದ್ದ ಆರೋಪಿಗಳು ಬೀಗ ಹಾಕಿದ ಮನೆ ಕಂಡ್ರೆ ಸಾಕು ಕಾಂಪೌಂಡ್ ಹಾರಿ ಕನ್ನ ಹಾಕುತಿದ್ರು.
ಅಸಲಿಗೆ ಬಂಧಿತ ಮೂವರು ಸಹ ವೃತ್ತಿಪರ ಕಳ್ಳರು.ತಮ್ಮ ತಮ್ಮ ಪ್ರತ್ಯೇಕ ಕೇಸ್ ಗಳಲ್ಲಿ ಜೈಲು ಸೇರಿದ್ದ ಈ ಮೂವರು ಜೊತೆಯಾಗಿವಂತೆ ಮಾಡಿದ್ದು ಜೈಲು. ಜೈಲಿನಲ್ಲಿ ಒಂದಾದ ಮೂವರಿಗೆ ತೇಜಸ್ ಆಫರ್ ನೀಡಿದ್ದನಂತೆ.ಆತ ಹೇಳಿದ ಏರಿಯಾಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಮೂವರು ಜೈಲಿನಿಂದ ಹೊರ ಬಂದ ಬಳಿಕ ತಮ್ಮ ಕೆಲಸ ಆರಂಭಿಸಿದ್ದರಂತೆ..ಲ ಅದರಂತೆ, ನಂದಿನಿಲೇಔಟ್, ವಿದ್ಯಾರಣ್ಯಪುರ, ಬಾಗಲಗುಂಟೆ ಸೇರಿದಂತೆ ಕೆಲ ಠಾಣಾ ವ್ಯಾಪ್ತಿಯಲ್ಲಿ ಸಾಲು ಸಾಲು ಮನೆಗಳ್ಳತನ ನಡೆಸಿದ್ದಾರೆ.
ಸದ್ಯ ಈ ಖತರ್ನಾಕ್ ಆರೋಪಿಗಳನ್ನ ನಂದಿನಿ ಲೇಔಟ್ ಇನ್ಸ್ಪೆಕ್ಟರ್ ವೆಂಕಟೇಗೌಡ ಅಂಡ್ ಟೀಂ ಅರೆಸ್ಟ್ ಮಾಡಿ, ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ 14 ಪ್ರಕರಣಗಳ ಸಂಬಂಧ ಬರೊಬ್ಬರಿ 55ಲಕ್ಷ ಮೌಲ್ಯದ 1.1 ಕೆಜಿ ಚಿನ್ನಾಭರಣ ಹಾಗೂ 2ಕೆಜಿ ಬೆಳ್ಳಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
-ಶ್ರೀನಿವಾಸ್ ಚಂದ್ರ ಪಬ್ಲಿಕ್ ನೆಕ್ಸ್ಟ್
Kshetra Samachara
09/03/2022 10:55 am