ಬೆಂಗಳೂರು : ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ಸೇರಿದಂತೆ ಇತರೆ ಬಹುತೇಕ ಕೆಲಸಗಳನ್ನು ಆನ್‌ಲೈನ್ ಮೂಲಕ ಸುಲಭವಾಗಿ ನಡೆಸುತ್ತಾರೆ..ಅದರಲ್ಲೂ ಆನ್‌ಲೈನ್ ಬಳಕೆ ಜನರಿಗೆ ತುಂಬಾ ಉಪಯುಕ್ತ ನಿಜ, ಆದರೆ ಸ್ವಲ್ವ ಎಚ್ಚರ ತಪ್ಪಿದರೆ ಸಾಕು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವುದು ಗ್ಯಾರಂಟಿ.. ಇನ್ನು ನೀವೇನಾದರೂ ಫೋನ್ ಪೇ ಗೂಗಲ್ ಪೇ ಪೇಟಿಎಂನಂತಹ ಅ್ಯಪ್ ಬಳಕೆ ಮಾಡುತ್ತಿದ್ದಾರೆ ಎಚ್ಚರ ವಹಿಸಿ ಇದು ಪಬ್ಲಿಕ್ ನೆಕ್ಸ್ಟ್ ಕಳಕಳಿಯ ಮನವಿ...
ಹೇಗೆ ಟಿಪ್ ಟಾಪ್ ಯಾಗಿ ರೆಡಿಯಾಗಿ ಕೂತ್ಕೊಂಡು ಯೋಚನೆ ಮಾಡಿ.. ಪೇಪರ್ ತಿರುಕ್ಕದನ್ನು ನೋಡಿದರೆ ಯಾರೇ ಆಫೀಸರ್ ಆಗಿರಬೇಕು ಅನ್ಕೋಬೇಡಿ.. ಆತರ ಅಂದ್ಕೊಂಡ್ರೆ ಅದು ನಿಮ್ಮ ಭ್ರಮೆ .. ಹೌದು ಇವ್ರು ಆನ್ ಲೈನ್ ಮೂಲಕ ವಂಚನೆ ಮಾಡುವ ವಂಚಕರ ತಂಡ..
ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅಂಬೇಡ್ಕರ್ ವೃತ್ತದ ಬಳಿಯಿರುವ ತುಳಸಿ ಕಲೆಕ್ಷನ್ ಬಟ್ಟೆ ಅಂಗಡಿ ಹಾಗೂ ಅದರ ಪಕ್ಕದಲ್ಲೇ ಇರುವ ಸೂರ್ಯ ಹಾರ್ಡ್ ವೇರ್ ಅಂಗಡಿಗಳಲ್ಲಿ ಆನ್ ಲೈನ್ ವಂಚಕರ ತಂಡ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿ, ಜೊತೆಗೆ ಮಾಲೀಕರ ಮೊಬೈಲ್ಗಳನ್ನು ಕದ್ದು ಪರಾರಿಯಾಗಿದ್ದಾರೆ..
ಕಳೆದ ನಾಲ್ಕು ದಿನಗಳ ಹಿಂದೆ ತುಳಸಿ ಕಲೆಕ್ಷನ್ ಅಂಗಡಿ ಮಾಲೀಕನಾದ ಕೈಲಾಶ್ ಎಂಬವರಿಗೆ ಭರತ್ ಪೇ ಕ್ಯೂಆರ್ ಕೋಡ್ ಅಪ್ಡೇಟ್ ಮಾಡಿಸಿ ಕೊಡುವುದಾಗಿ ಕರೆಮಾಡಿ ತಿಳಿಸಿದರು .ಬಳಿಕ ನೆನ್ನೆ ಅಂಗಡಿಗೆ ಬಂದಿದ್ದ ಯುವಕ ಕ್ಯೂಆರ್ ಕೋಡ್ ಹಾಗು ಪೋನ್ ಪೇ ಅಪ್ಡೇಟ್ ಮಾಡುವುದಾಗಿ ನಂಬಿಸಿ ಮೊಬೈಲ್ ಕದ್ದು, ಅಕೌಂಟ್ ನಲ್ಲಿದ್ದ 56 ಸಾವಿರ ರೂ ಹಣವನ್ನು ಎಗರಿಸಿದ್ದಾರೆ
ಇನ್ನು ಇದೇ ರಸ್ತೆಯಲ್ಲಿ ಸೂರ್ಯ ಹಾರ್ಡ್‌ವೇರ್ ಅಂಗಡಿ ಮಾಲೀಕರ ಒಬ್ಬರಿಗೆ ಅದೇ ದಿನ ಮತ್ತೊಬ್ಬ ವ್ಯಕ್ತಿಯಿಂದ38 ಸಾವಿರ ವಂಚನೆ ಮಾಡುವುದು ಬೆಳಕಿಗೆ ಬಂದಿದೆ. ಇನ್ನು ಹಣ ಕಳೆದುಕೊಂಡ ಮಾಲೀಕರು ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ ಉಡಾಫೆ ಉತ್ತರ ಗಳನ್ನು ಕೊಟ್ಟು ಕಳಿಸಿದ್ದಾರೆ ..
ಒಟ್ನಲ್ಲಿ ವಂಚನೆಗೊಳಗಾದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಠಾಣೆಗಳಲ್ಲಿ ಮಾಲೀಕರಿಗೆ ಬೈದು ಕಳುಹಿಸುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ ಇನ್ನಾದರೂ ಗ್ರಾಹಕರು ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ನಮ್ಮ ಆಶಯ..
-ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
06/03/2022 06:17 pm