ಬೆಂಗಳೂರು: ಜೆಜೆ ನಗರ ಪೊಲೀಸರಿಂದ ಇಬ್ಬರು ಗಾಂಜಾ ಪೆಡ್ಲರ್ಸ್ ಅರೆಸ್ಟ್ ಆಗಿದ್ದು ಬಂಧಿತ ಆರೋಪಿಗಳಿಂದ ಲಕ್ಷಾಂತರ ಮೌಲ್ಯದ 32 ಕೆಜಿ ಗಾಂಜಾ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 1 ದ್ವಿಚಕ್ರ ವಾಹನ ಸೀಜ್ ಮಾಡಲಾಗಿದೆ.
ಮನ್ಸೂರ್ ಮತ್ತು ಅಲಿಬಾ ಬಂಧಿತ ಆರೋಪಿಗಳು ಹೊರರಾಜ್ಯದಿಂದ ಗಾಂಜಾ ತರಿಸಿನಗರದಲ್ಲಿ ಸಪ್ಲೈ ಮಾಡ್ತಿದ್ರು. ಬೈಕ್ ನಲ್ಲಿ ಬಂದು ಗಾಂಜಾ ಮಾರಾಟ ಮಾಡುವಾಗ ಒಬ್ಬ ಆರೋಪಿ ಜೆಜೆಆರ್ ನಗರ ಪೊಲೀಸ್ರಿಗೆ ಲಾಕ್ ಆಗಿದ್ದ. ಈತ ಕೊಟ್ಟ ಮಾಹಿತಿಮೇರೆಗೆ ದಾಳಿ ನಡೆಸಿದಾಗ 32 ಕೆ.ಜಿ ಗಾಂಜಾ ಸಮೇತ ಮತ್ತೊಬ್ಬ ಆರೋಪಿ ಸಿಕ್ಕಿ ಬಿದ್ದಿದ್ದಾನೆ.ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
Kshetra Samachara
06/03/2022 12:15 pm