ಬೆಂಗಳೂರು: ಆಕೆ ಗಂಡನಿಂದ ದೂರವಾಗಿ ಒಂಟಿಯಾಗಿದ್ದಳು. ಈ ನಡುವೆ ಯಾರೋ ಒಬ್ಬ ಫೋನ್ ಮೂಲಕ ಪರಿಚಯ ಆಗಿದ್ದಾನೆ. ನಂತರ ಆತ ಈಕಗೆ ಮದುವೆಯ ಆಫರ್ ನೀಡಿದ್ದ ಆ ಬಗ್ಗೆ ಮಹಿಳೆಯ ತಾಯಿ ಜೊತೆಗೂ ಮಾತನಾಡಿದ್ದ. ಇಷ್ಟೇ ಆಗಿದ್ರೆ ಎಲ್ಲ ಚೆನ್ನಾಗಿರುತ್ತಿತ್ತು. ಆದ್ರೆ ಮದುವೆಯ ಮಾತು ನಂಬಿ ಮಹಿಳೆ ಅಪರಿಚಿತನ ಮುಖ ನೋಡುವ ಮುನ್ನವೇ ತನ್ನ ಖಾಸಗಿ ವಿಡಿಯೋಗಳನ್ನ ಅಪರಿಚಿತನಿಗೆ ಕಳುಹಿಸಿದ್ದಳು. ಹಿಂಗೆ ಕಳುಹಿಸಿದ ವಿಡಿಯೋ ಇಟ್ಟುಕೊಂಡು ಆತ ಹಣಕ್ಕಾಗಿ ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ನಂತರ ಜೈಲು ಸೇರಿದ್ದಾನೆ.
ವಿಜಯಪುರದ ಪ್ರಶಾಂತ್ ಬಂಧಿತ ಆರೋಪಿಯಾಗಿದ್ದು ಮಹಿಳೆ ಜೊತೆ ಮದುವೆ ನಾಟಕ ಆಡಿ ವಿಡಿಯೋ ಕಾಲ್‌ನಲ್ಲಿ ಮಾತಾಡಿ ಆಕೆಯ ನಗ್ನ ವಿಡಿಯೋ ಪಡೆದಿದ್ದ. ನಂತರ ವಿಡಿಯೋ ಮತ್ತು ಪೋಟೋ ಫೇಸ್‌ಬುಕ್‌ನಲ್ಲಿ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿ 50 ಸಾವಿರ ಹಣವನ್ನೂ ಪೀಕಿದ್ದ. ಬಳಿಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಮಹಿಳೆ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ಕೊಟ್ಟದ್ದಳು. ದೂರಿನ ನಂತರ ಪೊಲೀಸರು ಆರೋಪಿ ಪ್ರಶಾಂತ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
PublicNext
03/03/2022 01:55 pm