ಬೆಂಗಳೂರು: ಕುಡಿದ ಅಮಲಿನಲ್ಲಿ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಹೆಸರಘಟ್ಟ ರಸ್ತೆಯ ಬಾಗಲಗುಂಟೆಯಲ್ಲಿ ನಡೆದಿದೆ.
ಬಾಗಲಗುಂಟೆ ನಿವಾಸಿ ಮೋಹನ್ ಅಲಿಯಾಸ್ ಮುಂಗ್ಸಿ (45) ಕೊಲೆಯಾದ ವ್ಯಕ್ತಿ. ಮೋಹನ್ ನಿನ್ನೆ ಮನೆಯಲ್ಲಿ ಶಿವರಾತ್ರಿ ಹಬ್ಬ ಆಚರಿಸಿ ಸಂಜೆ ವೇಳೆಗೆ ಊರು ಮುಂದಿನ ದೇವಾಲಯಕ್ಕೆ ಹೋಗಿ ಬರುತ್ತೇನೆ ಅಂತ ಪತ್ನಿಗೆ ಹೇಳಿ ಹೋಗಿದ್ದರು. ಬಾಗಲಗುಂಟೆ ಬಸ್ ನಿಲ್ದಾಣದ ಫ್ರೆಂಡ್ಸ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವೆನೆಗೆ ತೆರಳಿದ್ದ ವೇಳೆ ಬಾರ್‌ನಲ್ಲಿ ಎಣ್ಣೆ ಕುಡಿಯುತ್ತಾ ಕುಳಿತ್ತಿದ್ದ ಸ್ನೇಹಿತರಾದ ಪವನ್ ಮತ್ತು ಕಿಶೋರ್ ಹಾಗೂ ಮೃತ ಮೋಹನ್ ನಡುವೆ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಬಾರ್ ಕ್ಯಾಷಿಯರ್ ನಿಮ್ಮ ಗಲಾಟೆ ಆಚೆ ಇಟ್ಕೊಳ್ಳಿ ಅಂತ ಬಾರ್‌ನಿಂದ ಆಚೆ ಕಳಿಸಿದ್ದಾನೆ.
ಬಾರ್‌ನಿಂದ ಹೊರ ಬರುತ್ತಿದ್ದಂತೆ ಅಲ್ಲೆ ಹೊರಗಿದ್ದ ಮರದ ಕಟ್ಟಿಗೆ ತೆಗೆದ್ಕೊಂಡು ಕಿಶೋರ್ ಮತ್ತು ಪವನ್ ಮೋಹನನ ತಲೆಗೆ ಬಲವಾಗಿ ಹೊಡೆದಿದ್ದಾರೆ. ಅಷ್ಟೇ, ಎಣ್ಣೆ ಏಟಲ್ಲಿದ್ದ ಸ್ನೇಹಿತರ ಅಮಲಿನ ಹೊಡೆತಕ್ಕೆ ಮೋಹನ್ ಸ್ಥಳದಲ್ಲೇ ಪ್ರಾಣ ಬಿಟ್ಟದ್ದಾನೆ.
ಈ ಸಂಬಂಧ ಆರೋಪಿ ಪವನ್ ಹಾಗೂ ಕಿಶೋರ್‌ನನ್ನ ವಶಕ್ಕೆ ಪಡೆದ ಬಾಗಲಗುಂಟೆ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮೇಲ್ನೋಟಕ್ಕೆ ಕ್ಷುಲ್ಲಕ ವಿಚಾರಕ್ಕೆ ಕೊಲೆ ನೆಡೆದಿದೆ ಎಂದು ತಿಳಿದು ಬಂದಿದೆ.
PublicNext
03/03/2022 09:16 am