ಯಲಹಂಕ: ಐಷಾರಾಮಿ ಕಾರುಗಳನ್ನು ಕದ್ದು, ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದು ಸವಾಲು ಹಾಕಿದ್ದ, ಮೂರು ರಾಜ್ಯಗಳ ಪೊಲೀಸರಿಗೆ ತಲೆನೋವಾಗಿದ್ದ ಕಾರು ಕಳ್ಳನನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪಕ್ಕದ ತೆಲಂಗಾಣ ರಾಜ್ಯದ ಪೊಲೀಸರಿಗೆ ಆಫರ್ ಕೊಟ್ಟ ಕಳ್ಳನನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೈ-ಎಂಡ್ ಕಾರು ಕದಿಯೋದನ್ನೆ ಕಸುಬು ಮಾಡಿಕೊಂಡಿದ್ದ ಜೈಪುರ ಮೂಲದ ಸತ್ಯೇಂದ್ರಸಿಂಗ್ ಶೇಖಾವತ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿ ಜೈಲಿಗೆಟ್ಟಿದ್ದಾರೆ.
ಈ ಹಿಂದೆ ಕನ್ನಡ ನಿರ್ಮಾಪಕ ಮಂಜುನಾಥರ ಹೈ-ಎಂಡ್ ಕಾರನ್ನ ಶೇಖಾವತ್ ಕದ್ದು ಎಸ್ಕೇಪ್ ಆಗಿದ್ದ. ಹೈದರಾಬಾದ್‌ನ ಬಂಜಾರಾಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಲಿ ಕಾರು ಕಳ್ಳತನ ಮಾಡಿದ್ದ ಆರೋಪಿ. ಈ ವೇಳೆ ಆರೋಪಿಯನ್ನ ತೆಲಂಗಾಣ ಪೊಲೀಸರು ಚೇಸ್ ಮಾಡಿ ಹಿಡಿಯಲು ಯತ್ನಿಸಿ ವಿಫಲರಾಗಿದ್ದರು.
ಎಸ್ಕೇಪ್ ಆಗಿದ್ದ ತೆಲಂಗಾಣ ಪೊಲೀಸರಿಗೆ ವ್ಯಾಟ್ಸಾಪ್ನಲ್ಲಿ Catch me if U Can ಅಂತ ಮೆಸೇಜ್ ಮಾಡಿ ಪೊಲೀಸರನ್ನು ಕೆಣಕಿದ್ದ.
ಕಾರಿನ ಡಿವೈಸನ್ನೆ ಹ್ಯಾಕ್ ಮಾಡಿ ಕಾರನ್ನ ಹೊತ್ತೊಯ್ತಿದ್ದ. ಕದ್ದ ಕಾರನ್ನು ಡ್ರಗ್ಸ್ ಮಾಫಿಯಾ ಲೀಡರ್‌ಗಳಿಗೆ ಮಾರಾಟ ಮಾಡ್ತಿದ್ದ ಶೇಖಾವತ್ ಎನ್ನಲಾಗಿದೆ.
ಸದ್ಯ ಬಂಧಿತನಿಂದ ಲಕ್ಷಾಂತರ ಬೆಲೆ ಬಾಳುವ ನಾಲ್ಕು ಐಷಾರಾಮಿ ಕಾರುಗಳನ್ನ ವಶಕ್ಕೆ ಪಡೆದಿದ್ದಾರೆ. ಅಮೃತಹಳ್ಳಿ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿ, ಇನ್ನಷ್ಟು ಜನ ಖದೀಮರ ಬಂಧನಕ್ಕೆ ಬಲೆಬೀಸಿದ್ದಾರೆ.
PublicNext
02/03/2022 10:23 pm