ಬೆಂಗಳೂರು: ರಾತ್ರೋರಾತ್ರಿ ಕಾರಿನಲ್ಲಿ ಬಂದ ಖದೀಮರು ಟಾಟಾ ಏಸ್ ವಾಹನ ಕದ್ದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದ ದೀಪಾಂಜಲಿನಗರದಲ್ಲಿ ನಡೆದ ಘಟನೆ ನಡೆದಿದೆ.
ಕಳ್ಳರ ಕೈಚಳಕದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಫೆ.13 ರಂದು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಟಾಟಾ ಏಸ್ ಟರಂಪೋ ವಾಹನವನ್ನು ಕಳ್ಳರು ಕದ್ದಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ವಾಹನ ಕಳ್ಳತನವಾಗಿರೋದು ಮಾಲೀಕರಿಗೆ ತಿಳಿದಿದೆ. ಸದ್ಯ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.
Kshetra Samachara
02/03/2022 07:10 pm