ಬೆಂಗಳೂರು: ಫೇಸ್ ಬುಕ್ ನಲ್ಲಿ ಮಹಿಳೆಯ ಫೋಟೋ ಹಾಕಿ ಕಿರುಕುಳ ನೀಡುತ್ತಿದ್ದ 35 ವರ್ಷದ ಚಂದ್ರಶೇಖರ ಅಲಿಯಾಸ್ ಡಾರ್ಲಿಂಗ್ ಚಂದು ಎಂಬಾತನನ್ನು ಬಾಗಲಗುಂಟೆ ಠಾಣಾ ಪೊಲೀಸ್ರು ಬಂಧಿಸಿದ್ದಾರೆ.
ಇನ್ನೂ ಫೋಟೋ ಜೊತೆ ಮಹಿಳೆ ಕಾಂಟ್ಯಾಕ್ಟ್ ನಂಬರ್ ಪೋಸ್ಟ್ ಮಾಡಿದ್ದ ಆರೋಪಿ ಚಂದ್ರಶೇಖರ ಮಹಿಳೆಯರ ಬಳಿ ಸ್ನೇಹ ಸಲುಗೆ ಬೆಳೆಸಿಕೊಂಡು ಅವರ ಫೋನ್ ನಂಬರ್ ಪಡೆದು ದಿನಕಳೆದಂತೆ ಮಹಿಳೆಯರಿಗೆ ಮದುವೆ ಆಗಿದ್ರು, ಆತನನ್ನು ಪ್ರೀತಿಸಲು, ಮದುವೆ ಆಗಲು ಪ್ರಪೋಸಲ್ ಮಾಡ್ತಿದ್ದ, ಅದನ್ನ ನಿರಾಕರಣೆ ಮಾಡಿದ ಮಹಿಳೆಯರ ಫೋಟೋ, ಕಾಂಟ್ಯಾಕ್ಟ್ ನಂಬರ್ ಗಳನ್ನ ಫೇಸ್ ಬುಕ್ ನಲ್ಲಿ ಹಾಕಿ ಅಸಭ್ಯವಾಗಿ ಕಾಮೆಂಟ್ ಮಾಡಿ ಕಿರುಕುಳ ನೀಡುತ್ತಿದ್ದ.
ಸದ್ಯ ಸಂತ್ರಸ್ತ ಮಹಿಳೆಯ ಆರೋಪದ ಮೇರೆಗೆ ಬಾಗಲಗುಂಟೆ ಠಾಣಾ ಪೊಲೀಸರು ಆರೋಪಿ ಚಂದ್ರಶೇಖರ್ ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
02/03/2022 05:07 pm