ಬೆಂಗಳೂರು: ನಗರದ ಅಪರಾಧ ಲೋಕದಲ್ಲಿ ಸಕ್ರಿಯನಾಗಿದ್ದ ಕೋಣನಕುಂಟೆ ಪೊಲೀಸ್ ಠಾಣೆಯ ರೌಡಿಶೀಟರ್ ಸಂತೋಷ ಕುಮಾರ್ @ ನಾಯಿ ಸಂತೋಷ್‌ನನ್ನು ಸಿಸಿಬಿಯ ರೌಡಿ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಕಳೆದ 27ರಂದು ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರ ತೋರಿಸಿ ಸಾರ್ವಜನಿಕರ ಬಳಿ ರಾಬರಿ ಮಾಡಿದ್ದ. ಮಾರಕಾಸ್ತ್ರ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2017ರಲ್ಲಿ ಕೋಣನಕುಂಟೆ ಠಾಣಾ ವ್ಯಾಪ್ತಿಯ ಜೋಡಿ ಕೊಲೆಯ ಆರೋಪಿ ಕೂಡ ಆಗಿದ್ದ ಸಂತೋಷ್ ತಲೆಮರೆಸಿಕೊಂಡು ಅಪರಾಧ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Kshetra Samachara
02/03/2022 11:09 am