ಬೆಂಗಳೂರು: ಕೆಜೆ ಹಳ್ಳಿ ಮಾರ್ಕೆಟ್ ನಲ್ಲಿ ಹಾಡ ಹಗಲೇ ಲಾಂಗ್ ತೋರಿಸಿ ವಸೂಲಿಗೆ ಯತ್ನಿಸಿದ ಇಬ್ಬರನ್ನು ಕೆಜೆ ಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ಮಜರ್ ಮತ್ತು ಸೈಯದ್ ಮಾಜರ್ ಬಂಧಿತ ಆರೋಪಿಗಳಾಗಿದ್ದಾರೆ.
ಫೆ. 20 ರಂದು ಅಂಗಡಿ ಮಾಲಿಕರಗೆ ಲಾಂಗ್ ತೋರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ವಿಡಿಯೋ ಸಾಕಷ್ಟು ಸುದ್ದಿಯಾಗಿತ್ತು. ಈ ಪ್ರಕರಣ ದಾಖಲಿಸಿಕೊಂಡಿದ್ದ ಕೆಜೆ ಹಳ್ಳಿ ಪೊಲೀಸ್ರು ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ವಸೂಲಿ ಯತ್ನದ ವಿಡಿಯೋವನ್ನ ಟ್ವಿಟರ್ ನಲ್ಲಿ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಕೂಡಲೇ ಆರೋಪಿಗಳ ಪತ್ತೆಗೆ ಮುಂದಾದ ಇನ್ಸ್ಪೆಕ್ಟರ್ ಸಂತೋಷ್ ಕೇಸ್ ದಾಖಲಿಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಈ ಹಿಂದೆ ಆರೋಪಿಗಳ ಮೇಲೆ ಎರಡು ಸುಲಿಗೆ ಪ್ರಕರಣಗಳಿದ್ದು, ತನಿಖೆ ವೇಳೆ ಆರೋಪಿ ಮಜರ್ ಬಳಿ 25 ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ.
PublicNext
26/02/2022 04:18 pm