ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಬಾರ್ ಮುಂದೆ ವ್ಯಕ್ತಿಯೊಬ್ಬ ಕೊಲೆಯಾಗಿರುವ ರೀತಿ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ತಲೆ ಮೇಲೆ ಸಿಮೆಂಟ್ ಕಲ್ಲು ಹಾಕಿ ಕೊಲೆಯಗಿರುವ ಅನುಮಾನ ವ್ಯಕ್ತವಾಗಿದ್ರು, ಇನ್ನೊಂದು ರೀತಿಯಲ್ಲಿ ನೋಡುವಾಗ ವ್ಯಕ್ತಿಯೇ ಸಿಮೆಂಟ್ ಬ್ಲಾಕ್ ಅನ್ನು ಎಸೆಯುವಾಗ ತಲೆ ಮೇಲೆ ಬಿದ್ದು ಸಾವನ್ನಪ್ಪಿರುವ ಅನುಮಾನ ಕೂಡ ಇದೆ.
ಯಾಕಂದ್ರೆ ಸುಮಾರು 40 ಕೆ.ಜಿ ಇರೋ ಸಿಮೆಂಟ್ ಕಲ್ಲನ್ನ ತಲೆ ಮೇಲೆ ಹಾಕಿದ್ರೆ ತಲೆ ಛಿದ್ರವಾಗಿ ಸಿಮೆಂಟ್ ಕಲ್ಲು ಕೂಡ ಛಿದ್ರವಾಗವೇಕಿತ್ತು. ಆದ್ರೆ ಸತ್ತ ವ್ಯಕ್ತಿಯ ಹಿಂಬಾಗದಲ್ಲಷ್ಟೇ ರಕ್ತಗಾಯವಾಗಿದ್ದು ಮುಖದಲ್ಲಿ ಯಾವುದೇ ಗಾಯಗಳಿಲ್ಲ. ಒಟ್ಟಿನಲ್ಲಿ ಅನುಮಾನಸ್ಪದ ಸಾವು ಹಿನ್ನೆಲೆ ಕಾಮಕ್ಷಿಪಾಳ್ಯ ಪೊಲೀಸ್ರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೃತ ಯಾರೂ ಎಂಬುದು ಇನ್ನು ಕನ್ಫರ್ಮ್ ಆಗಿಲ್ಲ. ಸತ್ತವನ ಜೇಬಲ್ಲಿ ಸತೀಶ್ ಎಂಬ ಹೆಸರಿನ ಆಧಾರ್ ಕಾರ್ಡ್ ಇದ್ದು ಆಧಾರ್ ಕಾರ್ಡ್ ಮ್ಯಾಚ್ ಆಗ್ತಿಲ್ಲ ಅಂತ ಡಿಸಿಪಿ ಸಂಜೀವ್ ಪಾಟೀಲ್ ಅನುಮಾನಿಸಿದ್ದಾರೆ.
Kshetra Samachara
25/02/2022 12:45 pm