ಬೆಂಗಳೂರು: ಹೇಳೋಕೆ ಅಂತಲೇ ಆತ ತಿಮ್ಮಪ್ಪನ ತಿರುಪತಿಯ ಲಾಡ್ಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ, ಹಣದಾಸೆಗೆ ಬಿದ್ದು ಬೆಂಗಳೂರಿನಿಂದ ತಿರುಪತಿಗೆ ಬಂದು ಮನೆ ಕನ್ನ ಮಾಡ್ತಿದ್ದವನನ್ನ ಈಗ ಚಂದ್ರಾಲೇಔಟ್ ಪೊಲೀಸ್ರು ಅರೆಸ್ಟ್ ಮಾಡಿ ಕೊನೆಗೂ ಶ್ರೀಕೃಷ್ಣ ಜನ್ಮಸ್ಥಳಕ್ಕೆ ಕಳುಹಿಸಿದ್ದಾರೆ.
ಐಷಾರಾಮಿ ಜೀವನ ನಡೆಸಲು ಮನೆಗಳ್ಳತ ಮಾಡ್ತಿದ್ದ ಸತೀಶ@ ಸತ್ಯ, ತಿರುಪತಿಯ ಲಾಡ್ಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಚಿತ್ತೂರು ಮೂಲದ ಈ ಸತೀಶ್, ಐಷಾರಾಮಿ ಜೀವನಕ್ಕಾಗಿ ಕಳ್ಳತನ ವೃತ್ತಿ ಮಾಡಿಕೊಂಡಿದ್ದ. ಆಂಧ್ರದಲ್ಲಿ ಕಳ್ಳತನ ಮಾಡಿದ್ರೆ ಪೊಲೀಸ್ರಿಗೆ ಲಾಕ್ ಆಗ್ತಿನಿ ಅಂತ ಸಿಲಿಕಾನ್ ಸಿಟಿಗೆ ಬಂದು ಕಳ್ಳತನ ಮಾಡಿ ಮತ್ತೆ ತಿರುಪತಿಗೆ ವಾಪಸ್ ಆಗ್ತಿದ್ದ.
ಕಳೆದ ಬಾರಿ ಸತ್ಯ ಚಂದ್ರಾಲೇಔಟ್ ನಲ್ಲಿ ಫಾರ್ಚುನರ್ ಕಾರಿನ ಗ್ಲಾಸ್ ಒಡೆದು ಹಣ ಹಾಗೂ ವಾಚ್ ಕದ್ದು ಎಸ್ಕೇಪ್ ಆಗಿದ್ದ.
ಈ ಕುರಿತು ಪ್ರಕರಣದ ತನಿಖೆ ನಡೆಸಿದ್ದ ಇನ್ಸ್ಪೆಕ್ಟರ್ ಮನೋಜ್, ಪಿ.ಎಸ್.ಐ ಅನಿತಾಲಕ್ಷ್ಮೀ ಮತ್ತು ಕ್ರೈಂ ತಂಡ ಆರೋಪಿಯನ್ನು ಬಂಧಿಸಿ,ಬಂಧಿತನಿಂದ 9 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ ಸೀಜ್ ಮಾಡಿದ್ದಾರೆ. ಆರೋಪಿ ಅನ್ನಪೂರ್ಣೇಶ್ವರಿ ನಗರ, ಚಂದ್ರಾಲೇಔಟ್, ಜ್ಞಾನ ಭಾರತಿ ಠಾಣೆಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದು, ಸದ್ಯ ಚಂದ್ರ ಲೇಔಟ್ ಪೊಲೀಸ್ರಿಗೆ ಲಾಕ್ ಆಗಿದ್ದಾನೆ.
Kshetra Samachara
24/02/2022 12:15 pm