ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಫ್ ಎಕ್ಸಲ್ , ಗುಡ್ ನೈಟ್ ಎಲ್ಲಾ ನಕಲಿ- ನಕಲಿ

ಬೆಂಗಳೂರು: ನಂದಿನಿ ನಕಲಿ ತುಪ್ಪ ಜಾಲ‌ ಅಲ್ಲಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರೋದು ಸಾಕಷ್ಟು ಸುದ್ದಿಯಾಗಿತ್ತು.‌ಸದ್ಯ ನಂದಿನಿ ನಕಲಿ ತುಪ್ಪದಂತೆ ಮನೆ ಬಳಕೆಯ ಬ್ರಾಂಡೆಡ್ ವಸ್ತುಗಳನ್ನು ನಕಲು ಮಾಡಿರುವ ಜಾಲ‌ ಬೆಂಗಳೂರಲ್ಲಿ ಪತ್ತೆಯಾಗಿದೆ.

ಪ್ರತಿಷ್ಠಿತ ಸರ್ಫೆಎಕ್ಸೆಲ್ ಮತ್ತು ‌ಗುಡ್ ನೈಟ್ ಲಿಕ್ವಿಡ್ ನಕಲು ಮಾಡಿ ಮಾರುತ್ತಿದ್ದ ಫ್ಯಾಕ್ಟರಿ‌ ಮೇಲೆ ಸಿಸಿಬಿ ದಾಳಿ ಮಾಡಿ ಲಕ್ಷ ಲಕ್ಷ ಮೌಲ್ಯದ ನಕಲಿ ವಸ್ತುಗಳನ್ನು ಸೀಜ್ ಮಾಡಿ ಆರೋಪಿ ಮಹೇಶ್ ನ ಬಂಧಿಸಿದ್ದಾರೆ.

ಬೈಯ್ಯಪ್ಪನ ಹಳ್ಳಿಯಲ್ಲಿ ಅಕ್ರಮ‌ ಪ್ಯಾಕ್ಟರಿ ನಡೆಸ್ತಿದ್ದ ಮಹೇಶ್ ಕಳೆದ ಕೆಲ ದಿನಗಳಿಂದ ಥೇಟ್ ಸರ್ಫ್ ಎಕ್ಸೆಲ್ ಪೌಡರ್ ರೀತಿ ಪ್ಯಾಕ್ ಮಾಡಿ ಅಂಗಡಿಗಳಿಗೆ ಸೇಲ್ ಮಾಡ್ತಿದ್ದ. ಗ್ರಾಹಕರು ಈ ವಸ್ತುಗಳನ್ನು ಅಸಲು ವಸ್ತುಗಳೆಂದು ನಂಬಿ ಖರೀದಿ ಮಾಡ್ತಿದ್ರು.‌ ಸದ್ಯ ಆರೋಪಿಯನ್ನು ಬಂಧಿಸಿ ಸಿಸಿಬಿ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Edited By : Shivu K
Kshetra Samachara

Kshetra Samachara

23/02/2022 08:23 am

Cinque Terre

2.23 K

Cinque Terre

0

ಸಂಬಂಧಿತ ಸುದ್ದಿ