ಯಲಹಂಕ: ದರೋಡೆ ಕಳ್ಳತನಗಳಿಂದ ಕುಖ್ಯಾತಿ ಪಡೆದಿದ್ದ ಇಮ್ರಾನ್ ಅಲಿಯಾಸ್ ಕುಂಟ ಇಮ್ರಾನ್(28) ಎಂಬಾತನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಈತನ ಸಹಚರ ಅಪ್ಸರ್ ಬೇಗ್ (19) ಎಂಬಾತ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೃತ್ಯ ನಡೆದ 10 ದಿನದ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ. ರಾಬರಿ ಕೇಸ್‌ನಲ್ಲಿ ಅರೆಸ್ಟ್ ಮಾಡಿದ್ದ ಸಂಪಿಗೆಹಳ್ಳಿ ಪೊಲೀಸರು ಜೈಲಿಗೆ ಕಳಿಸಿದ್ದರು.
ಫೆಬ್ರವರಿ 7ರಂದು MTR ಸಂಸ್ಥೆಲಿ ಹಣ ಸಂಗ್ರಹಿಸುವ ಸತೀಶ್ ಎಂಬಾತನ ಬಳಿಯಿಂದ 40ಸಾವಿರ ಹಣ ಇದ್ದ ಬ್ಯಾಗ್ ಕಸಿದು ಪರಾರಿಯಾಗಿದ್ರು. ಕಣ್ಣೂರು-ಬೆಟ್ಟಹಳ್ಳಿ ರಸ್ತೆಯ ಪುನರ್ವಿ ಕಾಂಡಿಮೆಂಟ್ಸ್ ಹತ್ತಿರ ಈ ದರೋಡೆ ಘಟನೆ ನಡೆದಿದೆ. ಕಲೆಕ್ಟ್ ಮಾಡಿಕೊಂಡಿದ್ದ ಹಣದೊಂದಿಗೆ ಸತೀಶ್ ಹೋಗುತ್ತಿದ್ದಾಗ ಬ್ಯಾಗ್ ಕಸಿದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಪ್ರತಿರೋಧಿಸಿದಾಗ ತಲೆಗೆ ಚಾಕುವಿನಿಂದ ಹಲ್ಲೆ ಮಾಡಿದ ಇಮ್ರಾನ್ ಮತ್ತು ಅಪ್ಸರ್ 40 ಸಾವಿರ ಹಣ ಇದ್ದ ಬ್ಯಾಗ್ ಕಸಿದಿದ್ದ. ನಂತರ ಪ್ರಕರಣ ದಾಖಲಿಸಿಕೊಂಡ ಸಂಪಿಗೇಹಳ್ಳಿ ಪೊಲೀಸರು ಇಬ್ಬರು ಖದೀಮರ ಹೆಡೆಮುರಿ ಕಟ್ಟಿದ್ದಾರೆ..
ಕುಂಟ ಇಮ್ರಾನ್ ಮೇಲೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 8ಕ್ಕೂ ಹೆಚ್ಚು ಕೇಸುಗಳಿದ್ದು, ವಿಚಾರಣೆ ನಡೆಯುತ್ತಿದೆ. ಪಾಪದ ಕೊಡ ತುಂಬಿಸಿಕೊಂಡಿದ್ದ ದರೋಡೆಕೋರ ಇಮ್ರಾನ್ ಮತ್ತೆ ಪುಣ್ಯಕ್ಕಾಗಿ ಪರಪ್ಪರ ಅಗ್ರಹಾರಕ್ಕೆ ಹೊರಟಿದ್ದಾನೆ.
Kshetra Samachara
18/02/2022 01:41 pm