ನೆಲಮಂಗಲ: ಕಬ್ಬಿಣದ ಸಲಾಕೆಯಿಂದ ಪ್ರಾವಿಷನ್ ಸ್ಟೋರ್ ಮತ್ತು ಟ್ರೇಡರ್ಸ್ಸ್ ಶೆಟರ್ ಬಾಗಿಲ ಬೀಗ ಒಡೆದು ಕಳ್ಳತನ ನೆಡೆದಿದ್ದು, ಕಳ್ಳರ ಚಲನವಲನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈ ಘಟನೆ ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ನಡೆದಿದೆ.
ಬೂದಿಹಾಳ್ ಗ್ರಾಮದ ನಿವಾಸಿ ಸೋಮಣ್ಣ ಎಂಬುವರಿಗೆ ಸೇರಿದ ಶ್ರೀ ಬೈಲಾಂಜನೇಯ ಪ್ರಾವಿಷನ್ ಸ್ಟೋರ್ ಶೆಟರ್ ಬಾಗಿಲ ಮೀಟಿದ ಕಳ್ಳರು, ಅಂಗಡಿ ಕ್ಯಾಶ್ ಬಾಕ್ಸ್ ನಲ್ಲಿದ್ದ 80 ಸಾವಿರ ನಗದು, 1 ಲಕ್ಷ ಮೌಲ್ಯದ ಸಿಗರೇಟ್ ಬಾಕ್ಸ್, ಮತ್ತೆರಡು ದುಬಾರಿ ಬೆಲೆಯ ಮೊಬೈಲ್ ಕಳವು ಮಾಡಿದ್ದಾರೆ.
ಇದೇ ವೇಳೆ ಪಕ್ಕದ ಮಧುಸೂದನ್ ಎಂಬುವರಿಗೆ ಸೇರಿದ ಲಕ್ಷ್ಮೀ ಟ್ರೇಡರ್ಸ್ ನಲ್ಲಿ ಬೀಗ ಒಡೆದು 500 ರೂ ಚಿಲ್ಲರೆ ಹಣ ಸೇರಿದಂತೆ 2,500 ಮೌಲ್ಯದ ಚಾಕ್ಲೇಟ್ ಬಾಕ್ಸ್ ಎಗರಿಸಿ ಪರಾರಿ ಆಗಿದ್ದಾರೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/02/2022 10:45 pm