ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಓನರು ದುಬೈಗೆ-ಕಳ್ಳರು ಒಳಗೆ-ಚಿನ್ನಾಭರಣ ದೋಚಿದ ಖದೀಮರು !

ದೊಡ್ಡಬಳ್ಳಾಪುರ: ಮನೆಗೆ ಬೀಗ ಹಾಕಿ ದುಬೈನಲ್ಲಿದ್ದ ಮಗಳ ಮನೆಗೆ ಹೋಗಿದ್ದ ಸಮಯದಲ್ಲಿ ಮನೆಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು, ಒಂದೂವರೆ ಕೆಜಿ ಚಿನ್ನ 3 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.

ದೊಡ್ಡಬಳ್ಳಾಪುರ ನಗರದ ಖಾಸ್ ಬಾಗಿಲು ಬಳಿಯ ಪದ್ಮ ರೆಡ್ಡಿ ಎಂಬುವರ ಮನೆಯಲ್ಲಿ ಕಳ್ಳತನ ಆಗಿದೆ. ಪದ್ಮ ರೆಡ್ಡಿ ಕುಟುಂಬ ಸಮೇತರಾಗಿ ನಾಲ್ಕು ತಿಂಗಳ ಹಿಂದೆ ದುಬೈಯಲ್ಲಿದ್ದ ಮಗಳ ಮನೆಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಈ ವೇಳೆ ಸುತ್ತಮುತ್ತಲಿನ ಮನೆಯವರಿಗೂ ತಿಳಿಸದೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿರುವ ಖತರ್ನಾಕ್ ಕಳ್ಳರು ಮನೆಯ ಬಾಗಿಲನ್ನು ಒಡೆದು ಒಂದೂವರೆ ಕೆ.ಜಿ. ಚಿನ್ನಾಭರಣ 3 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.

ಕಳ್ಳತನದ ಸುಳಿವು ಪೊಲೀಸರಿಗೆ ಸಿಗಬಾರದೆಂದು ಮನೆಯ ತುಂಬೆಲ್ಲಾ ಖಾರದ ಪುಡಿ ಎರಚಿ ಹೋಗಿದ್ದಾರೆ. ದುಬೈನಿಂದ ಇಂದು ವಾಪಸ್ ಆದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ.ವಂಶಿಕೃಷ್ಣ, ಅಪರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

16/02/2022 08:15 pm

Cinque Terre

3.82 K

Cinque Terre

0

ಸಂಬಂಧಿತ ಸುದ್ದಿ