ದೇವನಹಳ್ಳಿ: ಒಂದೇ ಗ್ರಾಮ- ಒಂದೇ ಸಮುದಾಯದ ಯುವಕ, ಆತನ ಚಿಕ್ಕಪ್ಪ ಹಾಗೂ ಸ್ನೇಹಿತನ ದುರ್ನಡತೆಗೆ ಇಡೀ ಗ್ರಾಮವೇ ಬೆಚ್ಚಿದೆ. ಇವರ ಕುಚೇಷ್ಟೆಗೆ ಹಲವು ಮಹಿಳೆ, ಯುವತಿಯರ ಬಾಳು ನಾಶವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸುಂದರ ಯುವತಿಯರೇ ಟಾರ್ಗೆಟ್ ಆಗ್ತಿದ್ದರು. ಅವರ ಫೋಟೊ ತೆಗೆದು, ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸ್ಟಾಗ್ರಾಂನಲ್ಲಿ ʼನಿಮಗೆ ಸೆಕ್ಸಿ ಗರ್ಲ್ಸ್ ಬೇಕಾ !? ಇವರನ್ನು ಸಂಪರ್ಕಿಸಿʼ ಎಂದು ರೇಟ್ ಫಿಕ್ಸ್ ಮಾಡಿ ತೇಜೋವಧೆ ಮಾಡ್ತಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಚೀಮಾಚನಹಳ್ಳಿಯ ನಿತಿನ್ ಕುಮಾರ್ ಅಲಿಯಾಸ್ ವಿನೋದ್ (22) ಪ್ರಮುಖ ಆರೋಪಿ. ಈತನ ಸಂಬಂಧಿ ಮುನಿರಾಜು ಅಲಿಯಾಸ್ 10 ರೂಪಾಯಿ (36), ನಲ್ಲಪ್ಪನಹಳ್ಳಿಯ ಆಕಾಶ್ (22) ಕುಕೃತ್ಯ ಎಸಗುತ್ತಿದ್ದು, ಈ ಕಾಮಾಂಧರನ್ನು ಬಂಧಿಸಲಾಗಿದೆ.
ನಿತಿನ್ ಗೆ ತಂದೆ ರಾಜಣ್ಣನ ರಿಯಲ್ ಎಸ್ಟೇಟ್ ಹಣವೇ ಶ್ರೀರಕ್ಷೆ. ರಾಜಣ್ಣನೂ ಮಗನ ಕುಕಾರ್ಯಕ್ಕೆ ಬೆಂಬಲ ನೀಡುತ್ತಿದ್ದ! ರಾಜಣ್ಣನ ಹೆಂಡತಿಯ ತಂಗಿ ಗಂಡ ಮುನಿರಾಜು ಯುವತಿಯರ ಫೋಟೊ ತೆಗೆಯುತ್ತಿದ್ದ. ಆ ಫೋಟೊವನ್ನು ಹಾಸನದಲ್ಲಿದ್ದ ಸ್ನೇಹಿತ ಆಕಾಶ್ ಗೆ ಕಳಿಸುತ್ತಿದ್ದರು.
ಆಕಾಶ್, ಫೇಕ್ ಸಿಮ್ ನಿಂದ ಇನ್ಸ್ಟ್ರಾಗ್ರಾಂನಲ್ಲಿ ಅಕೌಂಟ್ ತೆರೆದು ಪೋಸ್ಟ್ ಮಾಡ್ತಿದ್ದ. ಈ ಬಗ್ಗೆ ಗ್ರಾಮಸ್ಥರು ಠಾಣೆಗೆ ದೂರು ನೀಡಿದ್ದರು. ಒಂದು ವರ್ಷದಿಂದ ಈ ಮೂವರು ನಾನಾ ಅಕೌಂಟ್ ಗಳಿಂದ ಟವರ್ ಲೊಕೇಶನ್ ಹ್ಯಾಕ್ ಮಾಡಿ ʼದುರುಳತನʼ ತೋರಿದ್ದಾರೆ. ಚನ್ನರಾಯಪಟ್ಟಣ ಪೊಲೀಸರು ಸೈಬರ್ ಕ್ರೈಂಗೆ ಕೇಸ್ ವರ್ಗಾಯಿಸಿದ್ದರು. ಆಕಾಶನನ್ನು ಬಂಧಿಸಿದಾಗ ಕುಕರ್ಮ ಬಯಲಾಗಿದೆ.
SureshBabu,
Public Next ದೇವನಹಳ್ಳಿ
PublicNext
15/02/2022 04:36 pm