ಆನೇಕಲ್: ರಾಜಕಾಲುವೆ ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಪರಸ್ಪರ ಹೊಡೆದಾಡಿಕೊಂಡಿರೋ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮ ಲೇಔಟ್ ನಲ್ಲಿ ನಡೆದಿದೆ.
ಶ್ರೀರಾಮ ಬಡಾವಣೆಯಲ್ಲಿ ಸರ್ವೆ ನಂಬರ್ 75/1 ಈಶ್ವರ್ ರಾವ್ ಎಂಬವರು ವಾಸವಾಗಿದ್ದರು.ಅದರ ಪಕ್ಕದಲ್ಲಿ ವಾಸವಾಗಿದ್ದ ವೆಂಕಟೇಶ್ವರಲು ಎಂಬ ವ್ಯಕ್ತಿ ಉತ್ತರ ಭಾಗಕ್ಕೆ 20 ಅಡಿ ಜಾಗವಿರುವ ರಾಜ ಕಾಲುವೆಯಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದರು.
ಇವರ ಮಧ್ಯೆ ಈ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು.ಇನ್ನು ವೆಂಕಟೇಶ್ವರಲು 20 ಜಾಗದಲ್ಲಿ 13 ಅಡಿ ರಸ್ತೆ ನಿರ್ಮಾಣ ಮಾಡಿಕೊಂಡಿದ್ದರು.
ಇದೇ ವಿಚಾರಕ್ಕೆ ಜಗಳ ಶುರುವಾಗಿ ವೆಂಕಟೇಶ್ವರಲು ಹಾಗೂ ಅವರ ಪುತ್ರರಾದ ಗಜೇಂದ್ರ, ವಿಶ್ವನಾಥ್ , ಈಶ್ವರ್ ರಾವ್ ಮತ್ತು ಅವರ ಪತ್ನಿ ಮಾಧವಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರಿಯಾಗಿದೆ. ಹಲ್ಲೆ ಮಾಡಿದ ಇವರ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
12/02/2022 11:08 am