ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದು ಹೋಗಿದೆ. ಅದೂ ಹಾಡಹಗಲೇ ನಡೆದಿದ್ದು, ಜನ ಭಯಭೀತರಾಗಿದ್ದಾರೆ.
ಒಂಚೂರು ಮಿಸುಕಾಡಲೂ ಬಿಡದೆ ರನ್ನಿಂಗ್ ಶಾಟ್ ಹೊಡೆತದಿಂದ ವಿಶ್ವ ಎಂಬಾತ ನೆಲಕ್ಕುರುಳಿದ್ದಾನೆ! ಕುತ್ತಿಗೆಗೆ ಶಾರ್ಪ್ ವೆಪನ್ ನಿಂದ ಹಲ್ಲೆ ಮಾಡಿರೋ ಹಂತಕ, ತಕ್ಷಣ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಈ ಹತ್ಯೆ ನಡೆದಿರೋದು ನಂದಿನಿ ಲೇಔಟ್ ಬಳಿಯ ನರಸಿಂಹಸ್ವಾಮಿ ಲೇಔಟ್ ನಲ್ಲಿ.
ಕೊಲೆಯಾದ ವಿಶ್ವ, ಬಸವೇಶ್ವರನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಈ ಹಿಂದೆ ಇದೇ ನರಸಿಂಹಸ್ವಾಮಿ ಲೇಔಟ್ ನಲ್ಲೇ ವಾಸವಿದ್ದ ಈತ ಇತ್ತೀಚೆಗೆ ವಿದ್ಯಾರಣ್ಯಪುರಕ್ಕೆ ಶಿಫ್ಟ್ ಆಗಿದ್ದ. ಘಟನೆ ನಡೆದ ಜಾಗದಲ್ಲೇ ರವಿ ಎಂಬಾತನ ಮನೆ ಇದೆ. ಈ ಹಿಂದೆ ರವಿ ಕುಟುಂಬದೊಂದಿಗೆ ವಿಶ್ವ ಕಿರಿಕ್ ಮಾಡಿದ್ದ. ಒಂದೆಡೆ ದೈಹಿಕ ಸಂಬಂಧ ವಿಚಾರವಾಗಿ ಜಗಳ ನಡೆದಿತ್ತು. ಹೀಗಾಗಿ ಇದೇ ವಿಷಯಕ್ಕೆ ಇಂದು ವಿಶ್ವ, ರವಿ ಮನೆಗೆ ಬಂದಿರುವ ಸಾಧ್ಯತೆ ಇದೆ.
ಸ್ಥಳೀಯರ ಪ್ರಕಾರ ಇಂದು ಮುಂಜಾವ ಕಿರಿಕ್ ನಡೆದಿತ್ತಂತೆ. ನಂತರ ವಿಶ್ವ, ರವಿ ಮನೆಯಿಂದ ಹೊರ ಬಂದು ಜೇಬಿನಲ್ಲಿದ್ದ ಗುಟ್ಕಾ ಪ್ಯಾಕೇಟ್ ಹರಿದು ಬಾಯಿಗಿಡುವಷ್ಟರಲ್ಲಿ ಬೈಕ್ ನಲ್ಲಿ ಬಂದ ಹಂತಕ, ಗಾಡಿ ರನ್ನಿಂಗ್ ನಲ್ಲಿದ್ದಾಗಲೇ ಕುತ್ತಿಗೆ ಸೀಳಿ ಪರಾರಿ ಆಗಿದ್ದಾನೆ!
ಕುತ್ತಿಗೆಗೆ ಬಲವಾದ ಏಟು ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಿಸಿ ಟಿವಿ ಪ್ರಕಾರ ಒಬ್ಬನೇ ಈ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳ್ತಿವೆ. ನಂದಿನಿ ಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.
PublicNext
09/02/2022 05:48 pm