ದೊಡ್ಡಬಳ್ಳಾಪುರ : 80 ವರ್ಷದ ವೃದ್ಧೆ, 60 ವರ್ಷದ ಬುದ್ದಿಮಾಂದ್ಯ ಮಗನ ಅಸಹಾಯಕತೆ ಬಳಸಿಕೊಂಡು, ಅವರ ಹೆಸರಿನಲ್ಲಿದ್ದ 1 ಎಕರೆ ಜಮೀನನನ್ನು ನಕಲಿ ಆಧಾರ್ ಕಾರ್ಡ್ ಮತ್ತು ಪೋಟೋ ಬಳಸಿಕೊಂಡು ಜಮೀನು ನೊಂದಣಿ ಮಾಡಿಸಿಕೊಂಡಿರುವ ಆರೋಪ ದೊಡ್ಡಬಳ್ಳಾಪುರ ಉಪ ನೊಂದಣಿ ಕಚೇರಿಯಲ್ಲಿ ಕೇಳಿ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಅಂಬಲಗೆರೆಯ ಸರ್ವೆ ನಂಬರ್ 125 /4ರ 1 ಎಕರೆ 14 ಗುಂಟೆ ಪುಟ್ಟಗಂಗಮ್ಮ ನವರಿಗೆ ಸೇರಿದ್ದು, ಆದರೆ ಅವರಿಗೆ ತಿಳಿಯದೆಯೇ ನಕಲಿ ಪೋಟೋ ಮತ್ತು ದಾಖಲೆ ಲಗತ್ತಿಸಿ ದೊಡ್ಡಬಳ್ಳಾಪುರ ಉಪ ನೊಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಿ, ಜಮೀನು ಮಾರಾಟದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಜಮೀನನನ್ನ ಕಬಳಿಸಿದ್ದಾರೆ ಭೂಗಳ್ಳರು.
ಪುಟ್ಟಗಂಗಮ್ಮನವರ ಗಂಡ ಶಿವಗಂಗಯ್ಯನ ಮರಣ ನಂತರ ಈ ಜಮೀನು ಫವತಿ ಖಾತೆಯಾಗಿತ್ತು, 80 ವರ್ಷದ ಪುಟ್ಟಗಂಗಮ್ಮ ಮತ್ತು ಆಕೆಯ ಮಗ 60 ವರ್ಷದ ಶಿವಶಂಕರ್ ಬೆಂಗಳೂರಿನ ಕೋಡಿಗೆಹಳ್ಳಿಯ ಕನ್ನಲ್ಲಿ ವಾಸವಾಗಿದ್ದು, ವಯಸ್ಸಾದ ವೃದ್ದೆ ಮತ್ತು ಆಕೆಯ ಮಗ ಶಿವಶಂಕರ್ ಬುದ್ದಿಮಾಂದ್ಯನಾಗಿದ್ದು ಇವರ ಅಸಹಾಯಕತೆ ಬಳಸಿಕೊಂಡ ಭೂಗಳ್ಳರು ನಕಲಿ ಪೋಟೋ ಮತ್ತು ನಕಲಿ ದಾಖಲೆಗಳನ್ನ ದೊಡ್ಡಬಳ್ಳಾಪುರ ಉಪ ನೊಂದಣಿ ಕಚೇರಿಯಲ್ಲಿ ಲಗತ್ತಿಸಿ ದಿನಾಂಕ 31-01-2022 ರಂದು ಮಹೇಶ್ ಕುಮಾರ್ ಹೆಸರಿಗೆ ನೊಂದಣಿ ಮಾಡಿಸಿದ್ದಾರೆ.
ಅಂಬಲಗೆರೆ ನಿವಾಸಿಯಾದ ಗಂಗಧರ್ ಎಂಬುವರು ಪುಟ್ಟಗಂಗಮ್ಮನವರ ಜಮೀನು ನಕಲಿ ದಾಖಲೆಗಳ ಮೂಲಕ ನೊಂದಣಿಯಾಗಿರುವ ಮಾಹಿತಿ ಕಲೆ ಹಾಕಿದ್ದಾರೆ, ರಿಜಿಸ್ಟರ್ ಡೀಡ್ ಗಳ ಪರಿಶೀಲನೆ ಮಾಡಿದ್ದಾಗ ಪುಟ್ಟಗಂಗಮ್ಮ ಮತ್ತು ಶಿವಶಂಕರ್ ಬದಲಿಗೆ ಬೇರೆಯವರ ಪೋಟೋ , ಆಧಾರ ಕಾರ್ಡ್ ಬಳಸಿ ಜಮೀನು ನೊಂದಣಿಯಾಗಿದೆ ಎಂಬುದು ಅವರ ಆರೋಪವಾಗಿದೆ, ದೊಡ್ಡಬಳ್ಳಾಪುರ ಉಪ ನೊಂದಣಾಧಿಕಾರಿಯವರಿಗೆ ದೂರು ನೀಡಲಾಗಿದ್ದು, ದಾಖಲೆಗಳನ್ನ ಪರಿಶೀಲನೆ ಮಾಡಲಾಗುವುದು, ನಕಲಿ ದಾಖಲೆಗಳೆಂದು ಸಾಬೀತಾದ್ದಾರೆ ನೊಂದಣಿ ರದ್ದು ಮಾಡಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳುವುದ್ದಾಗಿ ಹೇಳಿದರು.
Kshetra Samachara
07/02/2022 10:45 pm