ಬೆಂಗಳೂರು: ಲಾಲನೆ , ಪಾಲನೆ ಮಾಡಬೇಕಿದ್ದ ಕಂದಮ್ಮನನ್ನು ಹೆತ್ತ ತಾಯಿಯೇ ಕತ್ತುಹಿಸಿಕಿ ಸಾಯಿಸಿದ ಘಟನೆ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿಯಲ್ಲಿ ತಡವಾಗಿ ಬೆಳಕಿನ ಬಂದಿದೆ.
ಹೆಣ್ಣು ಮಗುವಿನ ಹೆಸರು ಯಶ್ಚಿಕಾ. ಕಂದಮ್ಮನನ್ನು ಕೊಂದ ತಾಯಿ ಹೆಸರು ಪವಿತ್ರ (27).
ಪವಿತ್ರಾ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಮೂರು ವರ್ಷಗಳಿಂದ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ಒಂದು ವರ್ಷದಿಂದ ಆಸ್ಪತ್ರೆಗೂ ಹೋಗದೇ,ಮಾತ್ರೆಗಳನ್ನು ತೆಗೆದುಕೊಳ್ಳುವುದು ನಿಲ್ಲಿಸಿದ್ದರು.
ಮಗುವನ್ನು ಕೊಂದ ತಾಯಿ ಪವಿತ್ರಾ ಸೀರೆಯಿಂದ ಫ್ಯಾನ್‌ಗೆ ನೇಣು ಹಾಕಿಕೊಳ್ಳಲು ಮುಂದಾಗಿದ್ದರು.
ಆದರೆ ಧೈರ್ಯ ಸಾಲದೇ ಮನೆ ಕೆಳಗಡೆ ಬಂದು, ಖಾಸಗಿ ಉದ್ಯೋಗಿಯಾದ ಪತಿ ಜಯಚಂದ್ರನಿಗೆ ಕರೆ ಮಾಡಿ, ಮಗುವಿಗೆ ಉಸಿರಾಟದ ಸಮಸ್ಯೆಯಾಗಿದೆ ಎಂದು ನಾಟಕ ಮಾಡಿದ್ದಾಳೆ ಎನ್ನಲಾಗಿದೆ.
ಕೆಆರ್ ಪುರ ಪೊಲೀಸರು ಪ್ರಕರಣ ದಾಖಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Kshetra Samachara
05/02/2022 10:13 pm