ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಮಟ್ಕಾ ಜೂಜಾಟ ಅಡ್ಡೆ ಮೇಲೆ ದಾಳಿ,ನಾಲ್ಕು ಮಂದಿ ಜೈಲಿಗೆ

ನೆಲಮಂಗಲ: ನಂಬರ್ ಗೇಮ್ ನ ಆಟ ಲಾಟರಿ ದಂಧೆ ಗೆ ದುಡ್ಡು ಹಾಕಿ ಗಳಿಸಿಕೊಂಡವ್ರು ಒಂದಷ್ಟು ಮಂದಿ ಆದರೆ ಅದ್ರಿಂದ ಬರ್ಬಾದ್ ಆಗಿ ಹೋದವರು ಅಸಂಖ್ಯ. ಹೀಗಾಗಿ ಸರ್ಕಾರ ಅದನ್ನ ಬ್ಯಾನ್ ಮಾಡಿದೆ‌. ಆದ್ರೆ ಅದೇ ರೀತಿಯ ನಂಬರ್ ಗೇಮ್ ಆನ್‌ಲೈನ್ ಮಟ್ಕಾ ಜೂಜಾಟ ಈಗ ನಗರದ ಹೊರವಲಯಲ್ಲಿ ಪತ್ತೆಯಾಗಿದೆ.

ಖಚಿತ ಮಾಹಿತಿ ಆಧರಿಸಿ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಠಾಣಾ ಪೊಲೀಸ್ರು ನಂಬರ್ ಗೇಮ್ ಜೂಜಾಟದ ಅಡ್ಡೆ ಮೇಲೆ ದಾಳಿ ನೆಡೆಸಿ ಮಟ್ಕಾ ಕಿಂಗ್ ಪಿನ್ ಸೇರಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ಇನ್ನೂ ಬೆಂ.ಉತ್ತರ ತಾಲ್ಲೂಕು ಮಾಕಳಿ ಬಳಿ ಮಟ್ಕಾ ಕಿಂಗ್ ಪಿನ್ ಮಹೇಶ್ ತಾಳಿಕೋಟೆ , ಅಮಿನ್ ಸಾಬ್ ,ರಾಮಣ್ಣ, ಹನುಮಂತರಾಯ ಎಂಬ ನಾಲ್ವರು ಆರೋಪಿಗಳನ್ನ ಬಂಧಿಸಿದ್ದು, ಬಂಧಿತರಿಂದ 1500 ನಗದು, 4 ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.

ಇನ್ನೂ ಈ ಆನ್ ಲೈನ್ ನಂಬರ್ ಗೇಮ್ ನಲ್ಲಿ 10 ರೂ ಹೂಡಿದರೆ 800 ರೂಪಾಯಿ ಹಿಂದಿರುಗಿಸುವ ಗೇಮ್ ಬೆಟ್ಟಿಂಗ್, ಅವರವರ ಅದೃಷ್ಟ ನಂಬರ್ ಅಯ್ಕೆ ಮಾಡಿ, ಆನ್ ಲೈನ್ ರಿಸಲ್ಟ್ ಬಳಿಕ ಹಣಗಳಿಸುತ್ತಿದ್ರು ಎನ್ನಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಗಳನ್ನ ಜೈಲಿಗಟ್ಟಲಾಗಿದೆ.

Edited By : Nirmala Aralikatti
Kshetra Samachara

Kshetra Samachara

04/02/2022 11:34 am

Cinque Terre

640

Cinque Terre

0