ಬೆಂಗಳೂರು : ಇತ್ತಿಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ರಾಜ್ಯಮಟ್ದದಲ್ಲಿ ತೀವ್ರ ಚರ್ಚೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಜೈಲಿನಲ್ಲಿ ಗಾಂಜಾ ಘಮಲಿನ ವಾಸನೆ ಕೇಳಿಬಂದಿದೆ. ಆದರೆ ಈ ಬಾರಿ ಸಿಕ್ಕಿಬಿದಿದ್ದು ಸಜಾಬಂಧಿಗಳಲ್ಲ ಅಕ್ರಮ ಚಟುವಟಿಕೆ ನಿಯಂತ್ರಿಸಬೇಕಾದ ಎಫ್ ಡಿಎ ಅಧಿಕಾರಿಯೇ ಆರೋಪಿಯಾಗಿ ತಗಲಾಕಿಕೊಂಡಿದ್ದಾನೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಥಮ ದರ್ಜೆಯಾಗಿ ಅಧಿಕಾರಿಯಾಗಿರುವ 53 ವರ್ಷದ ಗಂಗಾಧರ್ ಎಂಬುವನನ್ನು ಸೆರೆಹಿಡಿದು ಜೈಲಾಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಒಳ ಉಡುಪಿನಲ್ಲಿತ್ತು ಹ್ಯಾಷ್ ಆಯಿಲ್ ಸೆಂಟ್ರಲ್ ಜೈಲಿನಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ ನಿನ್ನೆ ಬೆಳಗ್ಗೆ ಒಳ ಉಡುಪಿನಲ್ಲಿ ಎಲ್ ಎಸ್ ಡಿ ಹಾಗೂ ಹ್ಯಾಷ್ ಆಯಿಲ್ ಇಟ್ಟುಕೊಂಡು ಜೈಲಿನೊಳಗೆ ಸಾಗಿಸುವ ಯತ್ನದಲ್ಲಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಕೃತ್ಯ ಸಂಬಂಧ ಬಂಧೀಖಾನೆ ಇಲಾಖೆಯ ಎಡಿಜಿಪಿ ಅಲೋಕ್ ಮೋಹನ್ ಎಫ್ ಡಿಎ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾನೆ.
ಈತ ಹಿಂದೆ ಜೈಲಿನಲ್ಲಿ ಯಾರಿಗೆಲ್ಲಾ ಡ್ರಗ್ಸ್ ಸಪ್ಲೈ ಮಾಡಿದ್ದಾನ ? ಡ್ರಗ್ಸ್ ಹೇಗೆ ಸಿಕ್ತು ಎಂಬುದರ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.
Kshetra Samachara
03/02/2022 02:48 pm