ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೌಡಿ ನರಸಿಂಹ ಆ್ಯಂಡ್ ಗ್ಯಾಂಗ್ ಅಂದರ್

ಬೆಂಗಳೂರು : ಮೊನ್ನೆಮೊನ್ನೆ ನಟೋರಿಯಸ್ ರೌಡಿ ಶೀಟರ್ ನರಸಿಂಹ ರೆಡ್ಡಿ ಕಾಲಿಗೆ ಗುಂಡು ಹೊಡೆದು ಗಿರಿನಗರ ಪೊಲೀಸರು ಬಂಧಿಸಿರುವ ವಿಷಯ ನಿಮಗೂ ಗೊತ್ತು.

ಹಳೇ ವಿಚಾರ ಇಗ್ಯಾಕೆ ಅಂತಿರಾ ಅಲ್ಲೇ ಇರೋದು ಸುದ್ದಿ ಹೌದು ನರಸಿಂಹ ಕೇವಲ ರೌಡಿಸಂ ಮಾಡ್ಕೊಂಡು ಇರ್ಲಿಲ್ಲ ಸಾಲದಕ್ಕೆ ಇವನು ಮನೆ ಬೀಗ ಮುರಿಯೋ ಕೆಲಸ ಕೂಡಾ ಕರಗತ ಮಾಡಿಕೊಂಡಿದ್ದ.

ತಮಿಳುನಾಡಿನಿಂದ ಹುಡುಗರನ್ನ ಕರೆಸಿ ಬೆಂಗಳೂರಿನ ಮನೆ ಕಳ್ಳತನ ಮಾಡಿಸುತ್ತಿದ್ದ ಮಾಸ್ಟರ್ ಮೈಂಡ್ ನರಸಿಂಹ ಸದ್ಯ ಗಿರಿನಗರ ಪೊಲೀಸರ ಅತಿಥಿಯಾಗಿದ್ದಾನೆ.

ಕಳ್ಳತನ, ಸುಲಿಗೆ ಸೇರಿದಂತೆ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಸಿಂಗಲ್ ಮ್ಯಾನ್ ಆಗಿ ಕುಖ್ಯಾತಿ ಪಡೆದಿದ್ದ ರೌಡಿ ನರಸಿಂಹ, ದೊಡ್ಡಮಟ್ಟದ ಕಳ್ಳತಕ್ಕೆ ತಮಿಳು ಹುಡುಗರನ್ನು ಕರೆಯಿಸಿಕೊಳ್ಳುತ್ತಿದ್ದ ಎನ್ನುವುದು ವಿಚಾರಣೆಯಲ್ಲಿ ಗೊತ್ತಾಗಿದೆ.

ಸದ್ಯ ನರಸಿಂಹನ ನೇತೃತ್ವದಲ್ಲಿ ಕಳ್ಳತನ ಮಾಡುತ್ತಿದ್ದ ಕಾರ್ತಿಕ್, ವೆಂಕಟೇಶ್ ಹಾಗೂ ಶಿವ ಎಂಬುವರನ್ನು ಬಂಧಿಸಿ ಇವರಿಂದ 60 ಲಕ್ಷ ಮೌಲ್ಯದ 1 ಕೆಜಿ ಚಿನ್ನ ಹಾಗೂ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸುತಿದ್ದ ಮೂರು ಕಾರುಗಳನ್ನ ಗಿರಿ ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

02/02/2022 04:57 pm

Cinque Terre

2.73 K

Cinque Terre

0

ಸಂಬಂಧಿತ ಸುದ್ದಿ