ಬೆಂಗಳೂರು- ಉದ್ಯಮಿ ದಿ. ಆದಿಕೇಶವಲು ಮೊಮ್ಮಗ ಆದಿನಾರಯಣ್ ವಿಕೃತವಾಗಿ ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಲೆ ಮಾಡಿ ಪ್ರಾಣಿ ಪ್ರೀಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.ಇನ್ನೂ ಮೃತ ನಾಯಿಯ ಅಂತ್ಯಸಂಸ್ಕಾರ ವನ್ನು ನಟಿ ರಮ್ಯಾ ಸುಮ್ಮನಹಳ್ಳಿ ಚಿತಾಗರದಲ್ಲಿ ನೆರವೇರಿಸಿದ್ರು. ಇದಕ್ಕೂ ಮೊದಲು ಆರೋಪಿ ಆದಿ ವಿರುದ್ಧ ನಟಿ ರಮ್ಯ ಸರಣಿ ಟ್ವೀಟ್ ಮಾಡಿ ಆತನಿಗೆ ಡ್ರೈವಿಂಗ್ ಲೈಸನ್ಸ್ ಇದ್ಯಾ? ಅಲ್ಕೋಹಾಲ್ ಅಥವಾ ಡ್ರಗ್ಸ್ ಸೇವನೆ ಮಾಡಿದ್ದಾನಾ? ಪೊಲೀಸರು ಏನು ಕ್ರಮ ತೆಗೆದುಕೊಂಡಿದ್ದಾರೆ. ಆತ ಇನ್ನೂ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನಾ, ಅಥವಾ ಆತನನ್ನ ಬಿಟ್ಟು ಕಳಿಸಿದ್ರಾ? ಎಂದು ಟ್ವೀಟ್ ಮಾಡಿ ಮುಖ್ಯಮಂತ್ರಿಗಳು, ಸಂಸದ ತೇಜಸ್ವಿ ಸೂರ್ಯ, ಮೇನಕಾಗಾಂಧಿ, ಶಾಸಕಿ ಸೌಮ್ಯ ರೆಡ್ಡಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಆರ್ ಆಶೋಕ್ ಗೆ ಟ್ವೀಟ್ ಟ್ಯಾಗ್ ಮಾಡಿ ಶ್ವಾನ ಲಾರ ಸಾವಿಗೆ ನ್ಯಾಯ ಕೇಳಿದ್ದಾರೆ.
ಸಂಜೆ 5ಕ್ಕೆ ಸುಮನಹಳ್ಳಿ ಪ್ರಾಣಿಗಳ ಸ್ಮಶಾನದಲ್ಲಿ ಲಾರಾ ಅಂತ್ಯಸಂಸ್ಕಾರದ ಬಳಿಕ ನಟಿ ರಮ್ಯಾ ಮಾತನಾಡಿ, "ಆಕ್ಸಿಡೆಂಟ್ ಆಗುತ್ತೆ ಮನುಷ್ಯ ತಪ್ಪು ಮಾಡ್ತಾನೆ ಸಹಜ ಆದ್ರೆ ಈ ವಿಚಾರದಲ್ಲಿ ನೋಡಿದಾಗ ಬೇಕಂತಲೇ ನಾಯಿ ಮೇಲೆ ಗಾಡಿ ಹತ್ತಿಸಿದ್ದಾರೆ. ಇದನ್ನ ನೋಡಿ ಸಹಿಸಿಕೊಳ್ಳಲು ಆಗಲಿಲ್ಲ ,ನಮ್ಮ ದೇಶದಲ್ಲಿ ಅನಿಮಲ್ ಲಾ ಸ್ಟ್ರಿಕ್ಟ್ ಇಲ್ಲ. 50 ರೂಪಾಯಿ ಕೊಟ್ಟು ಹೊರಗಡೆ ಬರ್ತಾರೆ.
ದೊಡ್ಡವರು ದುಡ್ಡಿರೋರು ಕಾನೂನಿನಲ್ಲಿ ಎಸ್ಕೇಪ್ ಆಗ್ತಾರೆ ಕಾನೂನನ್ನು ಕಠಿಣಗೊಳಿಸಬೇಕು ಅಂತ ನಾನು ಸರ್ಕಾರಕ್ಕೆ ಮನವಿ ಮಾಡ್ತಿನಿ ಎಂದು ರಮ್ಯಾ ಭಾವುಕರಾಗಿ ನುಡಿದರು"
PublicNext
02/02/2022 08:43 am