ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರೋಲ್ ಮೇಲೆ ಜೈಲಿಂದ ಹೋಗಿ ಹದಿನಾಲ್ಕು ವರ್ಷ ನಾಪತ್ತೆಯಾಗಿದ್ದವ ಕೊನೆಗೂ ಅಂದರ್

ಬೆಂಗಳೂರು : ಪೆರೋಲ್ ಮೇಲೆ ಜೈಲಿಂದ ಹೋಗಿ ಹದಿನಾಲ್ಕು ವರ್ಷ ನಾಪತ್ತೆಯಾಗಿದ್ದವ ಕೊನೆಗೂ ಮತ್ತೆ‌ ಜೈಲೂ ಸೇರಿದ್ದಾನೆ. ಮಡಿವಾಳ ಪೊಲೀಸ್ರಿಂದ ಕರುಣಾಕರಣ್( 48) ಬಂಧನವಾಗಿದ್ದು ಸೆಂಟ್ರಲ್ ಜೈಲ್ ನಿಂದ 2008 ರಲ್ಲಿ ಪೆರೋಲ್ ಮೇಲೆ ಹೋಗಿದ್ದ ಕೈದಿ ಕರುಣಾಕರನ್ ಹೊರಬಂದಿದ್ದ.

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು ಕರುಣಾಕರ್,ತಾಯಿಗೆ ಆರೋಗ್ಯದ ಸಮಸ್ಯೆ ಎಂದು ಪೆರೋಲ್ ಪಡೆದು ಹೋಗಿ ತಲೆಮರೆಸಿಕೊಂಡಿದ್ದ. ಸತತ ಹದಿನಾಲ್ಕು ವರ್ಷಗಳಿಂದ ಮನೆಗೂ ಹೋಗದೆ ಹಾವೇರಿಯಲ್ಲಿ ವಾಸ್ತವ್ಯ ಹೂಡಿದ್ದ ಕರುಣಾಕರ್,

1998ರಲ್ಲಿ ಬನಶಂಕರಿಯಲ್ಲಿ ಸಂಜೀವ್ ಎಂಬಾತನ ಕೊಲೆ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಒಳಪಟ್ಟಿದ್ದ.

ಸದ್ಯ ಮಡಿವಾಳ ಪೊಲೀಸ್ರು ಹಾವೇರಿಯಲ್ಲಿ ಕೈದಿ ಕರುಣಾಕರನ್ ನ್ನ ಬಂಧಿಸಿ ಮತ್ತೆ ಪರಪ್ಪನ ಅಗ್ರಹಾರಕ್ಕೆ ಬಿಟ್ಟಿದ್ದಾರೆ. ಜೀವಾವಧಿ ಶಿಕ್ಷೆ ಹಿನ್ನಲೆ ಪೆರೋಲ್ ಬೇಡವೆಂದು ಮಡಿವಾಳ ಸ್ಟೇಷನ್ ನಿಂದ ರಿಪೋರ್ಟ್ ಸಹ ನೀಡಲಾಗಿತ್ತು.ಆಗಿನ ಜೈಲಾಧಿಕಾರಿಗಳ ನಿರ್ಲಕ್ಷ್ಯವಹಿಸಿ ಪೆರೋಲ್ ನೀಡಿದ್ರು.

ಪೆರೋಲ್ ಮೇಲೆ ಹೊರ ಹೋಗಿ ನಾಪತ್ತೆ ಬಗ್ಗೆ ಮಡಿವಾಳ ಠಾಣೆಯಲ್ಲಿ ದೂರು ನೀಡಲಾಗಿತ್ತು.

Edited By : PublicNext Desk
Kshetra Samachara

Kshetra Samachara

29/01/2022 08:54 pm

Cinque Terre

256

Cinque Terre

0

ಸಂಬಂಧಿತ ಸುದ್ದಿ