ಬೆಂಗಳೂರು: ತುಪ್ಪ ವಿವಿಧ ರೀತಿಯ ಖಾದ್ಯಗಳ ತಯಾರಿಕೆಗೆ ತುಪ್ಪ ಬೇಕೆ ಬೇಕು. ಅದರಲ್ಲೂ ನಂದಿನಿ ತುಪ್ಪದ ಬಗ್ಗೆ ಜನರಲ್ಲಿ ಅಪಾರ ನಂಬಿಕೆ ಇದೆ. ಆದರೆ ಈಗ ಮೈಸೂರಿನಲ್ಲಿ ತಯಾರಾದ ನಕಲಿ ನಂದಿ ತುಪ್ಪ ಬೆಂಗೂರು ಮಾರುಕಟ್ಟೆಗೆ ಬಂದು ಬಿಟ್ಟಿದೆ. ಇದನ್ನ ತಿಳಿದ ಕೆಎಂಎಫ್ ಎಂ.ಡಿ ಬಸವನಗುಡಿ ಠಾಣೆಗೆ ದೂರು ನೀಡಿದ್ದು ಎಫ್ ಐ ಆರ್ ಕೂಡ ದಾಖಲಾಗಿದೆ.
ಕೆಎಂಎಫ್‌ಗೆ ಬಂದ ಮಾಹಿತಿ ಅಧರಿಸಿ ಕೆಎಂಎಫ್ ಬೆಂಗಳೂರು ನಗರದ ಹನುಮಂತನಗರ, ಜಯನಗರ, ರಾಜಾಜಿನಗರ ನೆಲಮಂಗಲ ಬಳಿಯ ಮಾಕಳಿ, ಹೊಸಕೋಟೆಯ ದೇವನಗೊಂದಿ ಹಾಗೂ ಇನ್ನಿತರ ಕಡೆಗಳಲ್ಲಿ ಪರಿಶೀಲನೆ ಮಾಡಿ ಅಲ್ಲಿಂದ ತುಪ್ಪವನ್ನ ತಂದು ಕೆ ಎಂ ಎಫ್ ನಲ್ಲಿ ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ಕೆಎಂಎಫ್ ತುಪ್ಪದ ಜೊತೆ ನಕಲಿ ತುಪ್ಪ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಕೆಎಂಎಫ್ ಎಂಡಿ ಸುರೇಶ್ ಬಸವನಗುಡಿ ಠಾಣೆಗೆ ತೆರಳಿ, ಸಗಟು ತುಪ್ಪ ಮಾರಾಟ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ.
ಸದ್ಯ ಈ ಕುರಿತು ಬಸವನಗುಡಿ ಪೊಲೀಸ್ರು ಎಫ್ ಐ ಆರ್ ದಾಖಲಿಸಿಕೊಂಡಿದ್ದು ತನಿಖೆ ಮಾಡ್ತಾ ಇದ್ದಾರೆ.
Kshetra Samachara
28/01/2022 10:37 pm