ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಚಾಲಕನ ಯಾಮಾರಿಸಿ 3 ಲಕ್ಷ ನಗದು ಸಹಿತ ಮಾಂಗಲ್ಯ ಸರ 'ಮಂಗಮಾಯ'

ನೆಲಮಂಗಲ: ಹಾಡಹಗಲೇ ನಗರದ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಕೆಂಪು ಬಣ್ಣ ಎರಚಿ ಚಾಲಕನ ಗಮನ ಬೇರೆಡೆ ಸೆಳೆದ ಖದೀಮರು 3 ಲಕ್ಷ ನಗದು, ಚಿನ್ನದ ಮಾಂಗಲ್ಯ ಸರ ಎಗರಿಸಿ ಎಸ್ಕೇಪ್ ಆದ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಮಾದನಾಯಕನಹಳ್ಳಿ ಸಮೀಪದ ಟಿಸಿಐ ಬಳಿ ನಡೆದಿದೆ.

ಮಾದಾವರದ ಓಮೇಶ್ ಎಂಬವರಿಗೆ ಸೇರಿದ ನಗದು ಹಾಗೂ ಚಿನ್ನದ ಸರವನ್ನು ಕಳ್ಳರು ಎಗರಿಸಿದ್ದು, ಚಾಲಕ ಓಮೇಶ್ ತನ್ನ ಅಕ್ಕನ ಬಳಿ ಪಡೆದ ಸಾಲ ಹಿಂತಿರುಗಿಸೋ ಸಲುವಾಗಿ ತನ್ನ ಪತ್ನಿಯ 2 ಲಕ್ಷ ಮೌಲ್ಯದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ಜಿಂದಾಲ್ ಕೆನರಾ ಬ್ಯಾಂಕಿನಿಂದ 3 ಲಕ್ಷ ನಗದು ಡ್ರಾ ಮಾಡಿಕೊಂಡು ಟೀ ಕುಡಿಯಲು ತುಮಕೂರು ರಸ್ತೆಯ ಟಿಸಿಐ ಬಳಿ ಕಾಂಡಿಮೆಂಟ್ಸ್ ಶಾಪ್ ಒಳಗೆ ಹೋಗಿದ್ದರು.

ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಖತರ್ನಾಕ್‌ ಕಳ್ಳರು ಓಮೇಶ್ ಕಾರಿಗೆ ಬಣ್ಣ ಎರಚಿ, ಗಮನ ಬೇರೆಡೆ ಸೆಳೆದು ಕಾಂಡಿಮೆಂಟ್ಸ್ ಶಾಪ್‌ ನಲ್ಲಿಟ್ಟಿದ್ದ 3 ಲಕ್ಷ ಹಣ ಮತ್ತು ಚಿನ್ನದ ಮಾಂಗಲ್ಯ ಸರವಿದ್ದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾರೆ.‌ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ‌. ಈ ಬಗ್ಗೆ ಮಾದನಾಯಕಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಬಂಧನಕ್ಕೆ ಪೊಲೀಸ್ರು ಬಲೆ ಬೀಸಿದ್ದಾರೆ.

Edited By : Nagesh Gaonkar
PublicNext

PublicNext

26/01/2022 07:42 pm

Cinque Terre

42.21 K

Cinque Terre

0

ಸಂಬಂಧಿತ ಸುದ್ದಿ