ಬೆಂಗಳೂರು: ಮುಷ್ಕರದ ವೇಳೆ ಸಕಾರಣ ಇಲ್ಲದೇ ಸೇವೆಯಿಂದ ಏಕಾಏಕಿ ವಜಾ ಹಾಗೂ ಅಮಾನತು ಮಾಡಿ ಭ್ರಷ್ಟಾಚಾರ ಎಸಗಿದ ಆರೋಪದಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ದಾಖಲಾಗಿದೆ.
ಬೆಂಗಳೂರು ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿ ಇರುವ ಭ್ರಷ್ಟಾಚಾರ ನಿಗ್ರಹ ದಳದ ಅಧೀಕ್ಷಕ ಜಿ.ಎಚ್.ಯತೀಶ್ ಚಂದ್ರ ಅವರಿಗೆ ನೌಕರರೊಬ್ಬರು ದೂರು ಸಲ್ಲಿಸಿದ್ದಾರೆ.
ಕಾನೂನು ಬಾಹಿರವಾಗಿ ವಜಾ ಮಾಡಲಾಗಿದೆ ಎಂದು ಆಪಾದಿಸಿ ಬಿಎಂಟಿಸಿ ನೌಕರ ಗುಡ್ಡಪ್ಪ ಬಿ ಎಂಬುವವರು ಇದೇ 22ರಂದು ಎಸಿಬಿಗೆ ದೂರು ನೀಡಿದ್ದಾರೆ.
Kshetra Samachara
26/01/2022 04:37 pm