ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್‌: ಕಾಡಾನೆ ದಾಳಿಗೆ ಮಹಿಳೆ ಬಲಿ- ಅರಣ್ಯ ಇಲಾಖೆ ವಿರುದ್ಧ ಸಂಬಂಧಿಕರ ಕಿಡಿ

ಆನೇಕಲ್: ಕಟ್ಟಡ ನಿರ್ಮಾಣ ಕೆಲಸಕ್ಕೆ ಹೊರಟಿದ್ದ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆ ಕರ್ನಾಟಕದ ಗಡಿ ಭಾಗದ ಡೆಂಕಣಿಕೋಟೆ ಹೊಸೂರಿನಲ್ಲಿ ನಡೆದಿದೆ.

ಡೆಂಕಣಿಕೋಟೆ ಸಮೀಪದ ಚಪ್ರಾನಪಲ್ಲಿ ಗ್ರಾಮದ ಶಂಕರಮ್ಮ (35) ಮೃತ ಮಹಿಳೆ. ಕೆಲ ವರ್ಷಗಳ ಹಿಂದೆ ಪತಿ ಸುಬ್ರಮಣಿ ತೀರಿಕೊಂಡಿದ್ದರಿಂದ ಶಂಕರಮ್ಮ ಪುತ್ರನೊಂದಿಗೆ ವಾಸವಾಗಿದ್ದರು. ನಿನ್ನೆ ಬೆಳಗ್ಗೆ ಶಂಕರಮ್ಮ ಕಟ್ಟಡ ಕೆಲಸಕ್ಕಾಗಿ ಗ್ರಾಮದ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದರು. ಈ ವೇಳೆ ಬಂದ ಕಾಡಾನೆಯು ಶಂಕರಮ್ಮ ಅವರನ್ನು ಹೊಡೆದು ತುಳಿದು ಹಾಕಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಶಂಕರಮ್ಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದ ಬಳಿಕ ಶಂಕರಮ್ಮ ಸಂಬಂಧಿಕರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ತೆರಳಿದ್ದಾರೆ. ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಹಾಗೂ ಡೆಂಕಣಿಕೋಟೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಂಕರಮ್ಮ ಸಂಬಂಧಿಕರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದಕ್ಕೆ ಸ್ಪಂದಿಸಿದ ತಮಿಳುನಾಡು ಅಧಿಕಾರಿಗಳು ಸರ್ಕಾರದಿಂದ 5 ಲಕ್ಷ ರೂ. ಪರಿಹಾರವನ್ನು ನೀಡೋದಾಗಿ ಭರವಸೆ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

25/01/2022 11:43 am

Cinque Terre

620

Cinque Terre

0

ಸಂಬಂಧಿತ ಸುದ್ದಿ