ಬೆಂಗಳೂರು: ಬೆಂಗಳೂರಿನ ಕೇಂದ್ರ ಕಾರಗೃಹ ಅಂದ್ರೇನೆ ಹಾಗೆ ಅದೋಂತರ ಬೇರೆ ಪ್ರಪಂಚ. ಇಲ್ಲಿ ಮನುಷ್ಯತ್ವಕ್ಕಿಂತ ದುಡ್ಡಿಗೆ ಬೆಲೆ ಜಾಸ್ತಿ. ದುಡ್ಡು ಕೊಟ್ರೆ ಇಲ್ಲಿ ಎಂಥಹ ಜೀವನ ಬೇಕಾದ್ರು ಸಿಗುತ್ತೆ. ಗಾಂಜಾ, ಮೊಬೈಲ್, ಎಲ್ವೂ ಇಲ್ಲಿ ಸೇಲ್ ಆಗುತ್ತೆ. ಹಾಗೆ ಸೇಲ್ ಮಾಡೋದು ಇಲ್ಲಿನ ಭ್ರಷ್ಟ ಅಧಿಕಾರಗಳೇ. ಇವ್ರ ಭ್ರಷ್ಟಾಚಾರದ ಅನಾವರಣ ಇದೇ ಮೊದಲಾಗ್ತಿಲ್ಲ.ಸಾಕಷ್ಟು ಬಾರಿ ಆಗಿದೆ. ಆದ್ರೂ ಇಲ್ಲೇನೂ ಬದಲಾವಣೆ ಆಗಿಲ್ಲ. ಸದ್ಯ ಜೈಲಿನ ಮತ್ತೊಂದು ಕರ್ಮಕಾಂಡ ಬಯಲಾಗಿದೆ.
Yes. ಜೈಲಲ್ಲಿ ಸಣ್ಣಪುಟ್ಟ ದಿನ ನಿತ್ಯದ ವಸ್ತುಗಳಿಗೆ ದುಪ್ಪಟ್ಟು ಹಣ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡಿದಂಗೆ ಮಾರಾಟ ಮಾಡ್ತಿದ್ದಾರೆ. ಗೃಹಸಚಿವರೇ ಈ ಸ್ಟೋರಿ ಈ ವಿಡಿಯೋ ಒಮ್ಮೆ ನೋಡಿ.
ಪರಪ್ಪನ ಅಗ್ರಹಾರದ ಕರ್ಮಕಾಂಡ ಒಂದೆರೆಡಲ್ಲ:
ಕೈದಿಗಳಿಗೆ ಸಿಗೋದು ಕಳಪೆ ಗುಣಮಟ್ಟದ ಆಹಾರವೇ ಅನ್ನೋ ಅನುಮಾನ ಮೂಡ್ತಿದೆ. ಉತ್ತಮ ಆಹಾರ ಬೇಕಾದ್ರೆ ದುಪ್ಪಟ್ಟು ಕೊಡಬೇಕು. ದಿನನಿತ್ಯ ಬಳಕೆ ವಸ್ತುಗಳಾದ ಸೋಪು,ಶ್ಯಾಂಪು, ಬ್ರಷ್ ,ಬೀಡಿ ಸಿಗರೇಟ್‌ಗೆ ಇಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತದೆ. ಜೈಲಿನಲ್ಲಿ ನಡೆಯೋ ಕರಾಳ ದಂಧೆಯ ಈ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ. ಈ ದಂಧೆಕೋರರ ವಿರುದ್ಧ ಏನ್ ಕ್ರಮ ಕೈಗೊಳ್ತಿರಾ ಗೃಹಸಚಿವರೇ ನೀವೇ ತೀರ್ಮಾನ ಮಾಡಿ.
PublicNext
25/01/2022 10:56 am